29
May, 2026

A News 365Times Venture

29
Friday
May, 2026

A News 365Times Venture

ಸಿದ್ದರಾಮಯ್ಯ ನಡೆ ಮಾದರಿ : ಮುಂದಿನ ಸಿಎಂ ಬಗ್ಗೆ  ಹೈಕಮಾಂಡ್ ತೀರ್ಮಾನ- ದಿನೇಶ್ ಗುಂಡೂರಾವ್

Date:

ಮೈಸೂರು,ಮೇ,29,2026 (www.justkannada.in):  ಹೈಕಮಾಂಡ್ ಏನು ಹೇಳುತ್ತದೆ, ಅದರ ತೀರ್ಮಾನದ ಪ್ರಕಾರ ಸಿಎಂ ಸಿದ್ದರಾಮಯ್ಯ  ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ  ಅತ್ಯಂತ ಮಾದರಿಯಾದ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್,  ಹೈಕಮಾಂಡ್ ತೀರ್ಮಾನ ಮಾಡಿ ಇವತ್ತು ನಿರ್ಧಾರ ಕೈಗೊಂಡಿದೆ. ಸಿದ್ದರಾಮಯ್ಯನವರು ಅತ್ಯಂತ ಮಾದರಿಯಾದ ರೀತಿಯಲ್ಲಿ ನಡೆದುಕೊಂಡಿದ್ದಾರೆ, ಅವರ ನಾಯಕತ್ವದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಹೊಸ ವ್ಯವಸ್ಥೆ ತರಬೇಕು ಅಂತ ವರಿಷ್ಠರು ತೀರ್ಮಾನ ಮಾಡಿದಾಗ ಅದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಹೆಜ್ಜೆ ಇಡುತ್ತಿದ್ದೇವೆ. ಮುಂದೆ ಸಿಎಂ ಯಾರು ಆಗುತ್ತಾರೆ ಅನ್ನೋದನ್ನು ಸಿದ್ದರಾಮಯ್ಯ,, ಪಕ್ಷದ ಸೀನಿಯರ್ಸ್ ಎಲ್ಲರೂ ಕುಳಿತು ತೀರ್ಮಾನ ಮಾಡುತ್ತಾರೆ ಎಂದರು.

ರಾಜಕೀಯದಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ, ಅಧಿಕಾರ ಬರುತ್ತದೆ ಹೋಗುತ್ತದೆ. ಅಂತಿಮವಾಗಿ ನಾವು ಪಕ್ಷದಲ್ಲಿದ್ದುಕೊಂಡು ಪಕ್ಷದ ಬೆಳವಣಿಗೆ ಮತ್ತು ಸೈದ್ಧಾಂತಿಕ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಕಟ್ಟುವ ಕೆಲಸ ಮಾಡಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಲಕ್ಷಣಗಳಂತೂ ಇವೆ. ಸಿಎಲ್‌ಪಿ ಮೀಟಿಂಗ್ ಆದ ಮೇಲೆ ನಮ್ಮ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷವು ಜನರ ಏಳಿಗೆಗೋಸ್ಕರ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಕೊಟ್ಟಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Key words: Siddaramaiah, High command, decision , next CM,  Dinesh Gundurao

The post ಸಿದ್ದರಾಮಯ್ಯ ನಡೆ ಮಾದರಿ : ಮುಂದಿನ ಸಿಎಂ ಬಗ್ಗೆ  ಹೈಕಮಾಂಡ್ ತೀರ್ಮಾನ- ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ

ವಿಜಯಪುರ,ಮೇ, 29,2026 (www.justkannada.in):  ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಮಾತೀರದಲ್ಲಿ ಮತ್ತೆ ನೆತ್ತರು...

ಪಿಎಂ ಸೂರ್ಯ ಘರ್ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ

ಮೈಸೂರು, ಮೇ, 29, 2026  (www.justkannada.in): ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್...

 ನಾಳೆ ಶಾಸಕಾಂಗ ಪಕ್ಷದ ಸಭೆ: ಪ್ರಮಾಣವಚನಕ್ಕೆ ದಿನ ನಿಗದಿಯಾಗಿಲ್ಲ- ಡಿಕೆ ಶಿವಕುಮಾರ್

ಬೆಂಗಳೂರು,ಮೇ,29,2026 (www.justkannada.in):  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ  ಬಳಿಕ ಸಿದ್ದರಾಮಯ್ಯ ದೆಹಲಿಗೆ...

ಸಂಪುಟ ವಿಸರ್ಜನೆ ಹಿನ್ನೆಲೆ: ಸಚಿವರ ಸರ್ಕಾರಿ ವಾಹನಗಳು ವಾಪಸ್

ಬೆಂಗಳೂರು,ಮೇ,29,2026 (www.justkannada.in):  ಮುಖ್ಯಮಂತ್ರಿ ಸ್ಥಾನಕ್ಕೆ  ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ರಾಜ್ಯಪಾಲ...