ಮಂಗಳೂರು,ಫೆಬ್ರವರಿ,5,2026 (www.justkannada.in): ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಮದುವೆ ನಿಶ್ಚಯವಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಂತೂರು ವೃತ್ತದ ಬಳಿ ಈ ಘಟನೆ ನಡೆದಿದೆ. ಬಳ್ಳಾಲ್ ಬಾಗ್ ನಿವಾಸಿ 26 ವರ್ಷದ ದೀಪ್ತಿ ಮೃತ ಯುವತಿ. ದೀಪ್ತಿ ತನ್ನ ಭಾವಿ ಪತಿಯ ಜೊತೆ ವಾಮಂಜೂರಿಗೆ ಬರ್ತಡೇ ಪಾರ್ಟಿಗೆ ತೆರಳುತ್ತಿದ್ದಾಗ ಕುಡುಪು ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ದ್ವಿ ಚಕ್ರವಾಹನದಿಂದ ಕೆಳೆಗ ಬಿದ್ದ ದೀಪ್ತಿ ಹೊಟ್ಟೆ ಮೇಲೆ ಬಸ್ ಹರಿದಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಮಾರ್ಗ ಮಧ್ಯೆ ದೀಪ್ತಿ ಕೊನೆಯುಸಿರೆಳೆದಿದ್ದಾರೆ.
ಇನ್ನೂ ದೀಪ್ತಿಯ ಭಾವಿ ಪತಿ ಆಪಾಯದಿಂದ ಪಾರಾಗಿದ್ದಾರೆ. ಘಟನೆ ಖಂಡಿಸಿ ದೀಪ್ತಿ ಸಂಬಂಧಿಕರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ ಖಾಸಗಿ ಬಸ್ ಗಳ ಆರ್ಭಟ ಖಂಡಿಸಿ ಸ್ಥಳೀಯ ನಿವಾಸಿಗಳು ಧರಣಿ ನಡೆಸಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಮೃತದೇಹ ತೆಗದುಕೊಂಡು ಹೋಗಿ ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಮುತ್ತಿಗೆಗೆ ಯತ್ನಿಸಿದ್ದಾರೆ.
Key words: young woman, died, Accident, Mangalore
The post ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ: ಮದುವೆ ನಿಶ್ಚಯವಾಗಿದ್ದ ಯುವತಿ ಬಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




