1
July, 2026

A News 365Times Venture

1
Wednesday
July, 2026

A News 365Times Venture

ಹಲವು IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ

Date:

ಬೆಂಗಳೂರು, ಜೂನ್,30,2026 (www.justkannada.in): ರಾಜ್ಯ ಸರ್ಕಾರ ಮಂಗಳವಾರ ಹಲವು ಐಎಎಸ್ ಅಧಿಕಾರಿಗಳಿಗೆ ಹೊಸ ಹುದ್ದೆಗಳ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.

2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಮೈನಿಂಗ್ ಎನ್ವಿರಾನ್‌ಮೆಂಟ್ ರೆಸ್ಟೋರೇಷನ್ ಕಾರ್ಪೊರೇಷನ್ (KMERC), ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ನಿವೃತ್ತಿಯಾಗುತ್ತಿರುವ ಡಾ. ಸಂಜಯ್ ಎಸ್. ಬಿಜ್ಜೂರ್ ಅವರ ಸ್ಥಾನಕ್ಕೆ ಅವರನ್ನು ನಿಯೋಜಿಸಲಾಗಿದೆ.

2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಜೊತೆಗೆ ಅವರಿಗೆ ಕರ್ನಾಟಕ ಸ್ಟೇಟ್ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KEONICS) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ.

ಅದೇ ರೀತಿ, 2013ನೇ ಬ್ಯಾಚ್‌ನ ಯೋಗೀಶ್ ಎ.ಎಂ. ಅವರನ್ನು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಹೆಚ್ಚುವರಿ ಹೊಣೆಗಾರಿಕೆಯಾಗಿ ನಿರ್ವಹಿಸುತ್ತಿದ್ದ ಪ್ರಸನ್ನ ಎಚ್. ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.

2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನಿರ್ವಹಿಸುತ್ತಿದ್ದ ಡಾ. ಅರುಂಧತಿ ಚಂದ್ರಶೇಖರ್ ಅವರನ್ನು ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗಿದೆ.

ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.

Key words: Karnataka, Govt, Transfers, IAS Officers

The post ಹಲವು IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಡದಿ  ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ PIL

ಬೆಂಗಳೂರು,ಜೂನ್,30,2026 (www.justkannada.in): ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಬಿಡದಿ ಟೌನ್ ಶಿಪ್...

ಜೆಡಿಎಸ್-ಬಿಜೆಪಿ ಗೂಂಡಾವರ್ತನೆ; ಸಿದ್ದು ಎದುರು ಕಣ್ಣೀರಿಟ್ಟ ಪ್ರದೀಪ್

ಬೆಂಗಳೂರು,ಜೂನ್,30,2026 (www.justkannada.in): ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ...

Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!

ಮೈಸೂರು, ಜೂನ್ 30,2026 (www.justkannada.in): ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು...

ಪೊಲೀಸ್ ಅಧಿಕಾರಿಗಳ ಮಾಧ್ಯಮ ಸಂಪರ್ಕಕ್ಕೆ ನಿರ್ಬಂಧ: ಡಿಜಿಪಿ ಎಂ.ಎ. ಸಲೀಂ ಸುತ್ತೋಲೆ

ಬೆಂಗಳೂರು, ಜೂನ್,29,2026 (www.justkannada.in): ಅಧಿಕೃತ ಮಾಹಿತಿಯ ಅನಧಿಕೃತ ಬಹಿರಂಗಪಡಿಸುವಿಕೆಯನ್ನು ತಡೆಯಲು ಕರ್ನಾಟಕ...