ಗದಗ,ಜುಲೈ,7,2025 (www.justkannada.in): ಸಿಎಂ ಬದಲಾವಣೆ ಕುರಿತು ಇತ್ತೀಚೆಗೆ ಹಲವು ಚರ್ಚೆಗಳಾಗುತ್ತಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗದಗದ ಗೌಜಗೇರಿ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಅಲೈ ದೇವವಾಣಿ ಕಾರ್ಣಿಕ ನುಡಿದಿದೆ.
ಹಾಲುಮತದ ಕೈಯಲ್ಲಿ ಅಧಿಕಾರವಿದೆ. ನಾಯಕತ್ವ ಬದಲಾವಣೆ ಅಷ್ಟು ಸುಲಭ ಅಲ್ಲ. ಸಿಎಂ ಬದಲಾವಣೆ ಅಷ್ಟು ಸುಲುಭವಲ್ಲ. ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ . ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಎಂದು ಅಲೈ ದೇವವಾಣಿ ನುಡಿದಿದೆ.
ಇತ್ತೀಚೆಗೆಷ್ಟೆ ಸಿಎಂ ಸಿದ್ದರಾಮಯ್ಯ ಮಾತನಾಡಿ ನಾನೇ 5 ವರ್ಷ ಸಿಎಂ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದವರನ್ನ ತಣ್ಣಗಾಗಿಸಿದ್ದರು.
Key words: Power, Changing, CM , not, easy , Alai Devravani, Gadag
The post ಹಾಲುಮತದ ಕೈಯಲ್ಲಿ ಅಧಿಕಾರವಿದೆ: ಸಿಎಂ ಬದಲಾವಣೆ ಅಷ್ಟು ಸುಲಭ ಅಲ್ಲ- ಅಲೈ ದೇವರವಾಣಿ ಕಾರ್ಣಿಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.