28
March, 2026

A News 365Times Venture

28
Saturday
March, 2026

A News 365Times Venture

ಹಿಂದಿ ಕಲಿಯಬಾರದು ಅಂತೇನಿಲ್ಲ, ಆದ್ರೆ ಪರೀಕ್ಷೆ ಕಡ್ಡಾಯವಾಗಬಾರದಷ್ಟೆ- ಸಿಎಂ ಸಿದ್ದರಾಮಯ್ಯ

Date:

ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದಲ್ಲಿಈ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿ ಮಾಡಲಾಗುತ್ತದೆ.  ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಹಿಂದಿ ಭಾಷೆ ಕಡ್ಡಾಯ ಮಾಡಬಾರದು ಅಂತ ಹೇಳಿದ್ದೇವೆ. ಈ ವರ್ಷದಿಂದಲೇ ಜಾರಿಯಲಿರುತ್ತದೆ. ಇದಕ್ಕೆ ವಿರೋಧ ಪರ ಎಲ್ಲವೂ ಇರುತ್ತದೆ. ಹಿಂದಿ ಕಲಿಯಬಾರದು ಅಂತ ಇಲ್ಲ. ಆದರೆ ಪರೀಕ್ಷೆ ಕಡ್ಡಾಯ ಆಗಬಾರದು ಅಷ್ಟೇ ಎಂದರು.

ರಾಜ್ಯದಲ್ಲಿ ಬೈ ಎಲೆಕ್ಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಎರಡು ಕಡೆ ನಾವು ಗೆಲ್ಲುತ್ತೇವೆ. ನಾನು ಕೂಡ ಪ್ರವಾಸ ಹೋಗುತ್ತಿದ್ದೇನೆ. ಬಾಗಲಕೋಟೆ ದಾವಣಗೆರೆ ಎಲ್ಲ ಕಡೆ ಹೋಗುತ್ತೇನೆ ಎಂದರು.

ಬೈ ಎಲೆಕ್ಷನ್ ಮುಂದಿನ ಚುನಾವಣೆಯ ದೀಕ್ಸೂಚಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಬಿಜೆಪಿ ಇದ್ದಾಗ ನಾವು ಬೈ ಎಲೆಕ್ಷನ್ ಗೆದ್ದಿದ್ದೇವೆ. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ಅದು ದಿಕ್ಸೂಚಿನಾ ನೀವೇ ಹೇಳಬೇಕು. ಯಾವ ಎಲೆಕ್ಷನ್ ಅದರೂ ನಾವೇ ಗೆಲ್ಲುತ್ತೇವೆ. 2028 ರಲ್ಲೂ ನಾವೇ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಕೂಡ ಯಾವ ಗೊಂದಲ ಇಲ್ಲ. ಎಲ್ಲವೂ ಕೂಡ ಸರಿಯಾಗಿದೆ ಎಂದರು.

ಹೈ ಕಮಾಂಡ್ ಅನುಮತಿ ನಾನೇ ಇನ್ನೂ ಎರಡು ಬಜೆಟ್ ಮಂಡನೆ

ಸದನದಲ್ಲಿ ಹೈ ಕಮಾಂಡ್ ಅವಕಾಶ ಕೊಟ್ಟರೆ ನಾನೇ ಇನ್ನೆರಡು ಬಜೆಟ್ ಮಂಡನೆ ಮಾಡುತ್ತೇನೆ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಹೈ ಕಮಾಂಡ್ ಅನುಮತಿ ನಾನೇ ಇನ್ನೂ ಎರಡು ಬಜೆಟ್ ಮಂಡನೆ ಮಾಡುತ್ತೇನೆ. ಎಲ್ಲವು ಹೈ ಕಮಾಂಡ್ ಗೆ ಬಿಟ್ಟಿದ್ದು. ಚುನಾವಣೆಗೂ ಅದಕ್ಕೂ ಸಂಬಂಧವಿಲ್ಲ ಎಂದರು.

ನಾವು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಕೆಲಸ ಮಾಡುತ್ತಿದ್ದೇವೆ

ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾವು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಕೆಲಸ ಮಾಡುತ್ತಿದ್ದೇವೆ. ಈಗ ಪೊಲೀಸರು ರೇಡ್ ಮಾಡಿದ ವಿಚಾರ ಗೊತ್ತಾಗಿದೆ. ಮುಂಬೈ ಲಿಂಕ್ ಇರಲಿ ಯಾವುದೇ ಇರಲಿ. ಡ್ರಗ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದರು.  ಮೈಸೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಸಮಸ್ಯೆ ವಿಚಾರ ಆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಐಪಿಎಲ್ ಟಿಕೆಟ್ ಕೇಳಿದ ಶಾಸಕರ ನಡೆ ಸಮರ್ಥಿಸಿಕೊಂಡ ಸಿಎಂ

ವಿಧಾನಸಭೆಯಲ್ಲಿ ಶಾಸಕರೊಬ್ಬರು ಐಪಿಎಲ್ ಮ್ಯಾಚ್ ಟಿಕೆಟ್ ಕೇಳಿದ ವಿಚಾರ, ಈ ಹಿಂದೆ ಒಂದು ಟಿಕೆಟ್ ಕೊಡುತ್ತಿದ್ದರು. ಈಗ ಎರಡು ಟಿಕೆಟ್ ಕೊಡಲು ಶಾಸಕರು ಕೇಳಿದರು ಅದರಲ್ಲೇನಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಹಾಗೆಯೇ ಇಂದು ನಾನು ಮ್ಯಾಚ್ ನೋಡಲು ಈಗ ಹೋಗುತ್ತಿಲ್ಲ. 9ನೇ ತಾರೀಖು ತನಕ ಬ್ಯುಸಿ ಫ್ರೀ ಆದರೆ ನೋಡಲು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Bilingual policy, CM Siddaramaiah, Mysore

The post ಹಿಂದಿ ಕಲಿಯಬಾರದು ಅಂತೇನಿಲ್ಲ, ಆದ್ರೆ ಪರೀಕ್ಷೆ ಕಡ್ಡಾಯವಾಗಬಾರದಷ್ಟೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಆರೋಪ: ಸ್ಪಷ್ಟನೆ  ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,28,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್  ಅಳವಡಿಸಲಾಗಿದೆ...

SSLC ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್, 28, 2026 (www.justkannada.in): ಈ ವರ್ಷದಿಂದಲೇ ಎಸ್ ಎಸ್...

ಯುವಕರಿಗೆ ನಿರಾಸೆಯಾಗಬಾರದೆಂದು IPL ಪಂದ್ಯಗಳಿಗೆ ಅನುಮತಿ-ಗೃಹ ಸಚಿವ ಪರಮೇಶ್ವರ್

ತುಮಕೂರು,ಮಾರ್ಚ್,28,2026 (www.justkannada.in): ಯುವಕರಿಗೆ ನಿರಾಸೆಯಾಗಬಾರದೆಂದು ಬೆಂಗಳೂರಿನ ಚಿನ್ನಸ್ವಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ...

ತಂದೆಯ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ಶಿವಮೊಗ್ಗ,ಮಾರ್ಚ್,28,2026 (www.justkannada.in):  ನಿನ್ನೆ ತಂದೆ ಸಾವು. ಇಂದು ಎಸ್ ಎಸ್ ಎಲ್...