ಬೆಂಗಳೂರು,ಫೆಬ್ರವರಿ,5,2026 (www.justkannada.in): ಹೈಮಾಂಡ್ ಹೇಳಿದವರು ಸಿಎಂ ಆಗುತ್ತಾರೆ ಹೈಕಮಾಂಡ್ ಯಾರನ್ನು ಸಿಎಂ ಮಾಡುತ್ತೋ ಅವರಿಗೆ ಜೈ ಅನ್ನುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಸಂಬಂಧ ಆದಷ್ಟು ಬೇಗ ಹೈಕಮಾಂಡ್ ನಿರ್ಧರಿಸಲಿ. ಹೈಮಾಂಡ್ ಹೇಳಿದವರು ಸಿಎಂ ಆಗುತ್ತಾರೆ ಹೈಕಮಾಮಡ್ ಯಾರನ್ನು ಮಾಡುತ್ತೋ ಅವರಿಗೆ ಜೈ ಎನ್ನುತ್ತೇವೆ. ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಇದೆಲ್ಲಾ ಫುಲ್ ಪ್ಯಾಕೇಜ್. ನಾಯಕತ್ವ ಬದಲಾವಣೆ, ಸಂಪುಟ ಪುನರಾಚನೆ ಎಲ್ಲವೂ ಬಗೆಹರಿಯಬೇಕು ಎಂದರು.
ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂದು ಒತ್ತಾಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ನನ್ನದು ಆ ರೀತಿ ಬೇಡಿಕೆ ಇಲ್ಲ. ಪರಮೇಶ್ವರ್ ಸಹ ರೇಸ್ ನಲ್ಲಿದ್ದಾರೆ. ಸಚಿವನಾಗಿ ಎರಡು ವರ್ಷ ಕೆಲಸ ಮಾಡುತ್ತೇನೆ. ಮುಂದೆ ನೋಡೋಣ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ರೇಸ್ ನಲ್ಲಿ ನಾನು ಇಲ್ಲ. ನಾಯಕತ್ವ ಬದಲಾವಣೆ ಎಂಬ ಬಗ್ಗೆ ಡಿಕೆ ಶಿವಕುಮಾರ್ ಅವರನ್ನೇ ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ನಿಜ. ಆದಷ್ಟು ಬೇಗ ಹೈಕಮಾಂಡ್ ಇದಕ್ಕೆ ಇತಿಶ್ರೀ ಹೇಳಬೇಕು ಎಂಬುದು ನಮ್ಮ ಆಶಯ ಎಂದರು.
Key words: high command, CM, Change, Minister, Satish Jarkiholi
The post ಹೈಕಮಾಂಡ್ ಯಾರನ್ನ ಸಿಎಂ ಮಾಡುತ್ತೋ ಅವರಿಗೆ ಜೈ ಅನ್ನುತ್ತೇವೆ-ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




