ಮೈಸೂರು,ಮೇ,27,2025 (www.justkannada.in): ಅಕ್ರಮಗಳನ್ನು ಮುಚ್ಚಿಹಾಕಲು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ರಕ್ಷಿತ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸ್ನೇಹಮಯಿ ಕೃಷ್ಣ, ದೇವನೂರು ಭಾಗದಲ್ಲಿ ಮಹೇಂದ್ರ ಮನೆ ಎಂಬವರಿಗೆ ಕೃಷಿ ಭೂಮಿ ಅಂತ ಹೇಳಿ ಅಕ್ರಮವಾಗಿ ದಾಖಲೆ ನೀಡಿದ್ದು ಇದೇ ರಕ್ಷಿತ್. ಅಂದು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಇದೀಗ ಅವರನ್ನೇ ಎಂ.ಡಿ.ಎ ಆಯುಕ್ತರನ್ನಾಗಿ ಮಾಡಿದ್ದಾರೆ. ನಾನು ಲೋಕಾಯುಕ್ತಕ್ಕೆ ಕೊಟ್ಟಿರುವ ದೂರಿನಲ್ಲಿ ಇವರ ಹೆಸರು ಇದೆ. ಇವರು ಮಾಡಿರುವ ಅಕ್ರಮಗಳನ್ನು ಕೂಡ ಹೇಳಿದ್ದೇನೆ. ಹೀಗಿರುವಾಗ ಇವರನ್ನೇ ಎಂಡಿಎ ಆಯುಕ್ತರನ್ನಾಗಿ ಸರ್ಕಾರ ಮಾಡಿದೆ .
ಅಕ್ರಮಗಳನ್ನು ಮುಚ್ಚಲು ರಕ್ಷಿತ್ ಅವರನ್ನು ಅಧಿಕಾರಕ್ಕೆ ತಂದು ಕೂರಿಸಿದ್ದಾರೆ. ಎಲ್ಲದಕ್ಕೂ ಕೂಡ ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ನಾನು ಕಾನೂನು ಸಮರ ಮುಂದುವರೆಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
Key words: Rakshith, appointed, MDA, Commissioner, Snehamayi Krishna
The post ಅಕ್ರಮಗಳನ್ನು ಮುಚ್ಚಿ ಹಾಕಲು MDA ಆಯುಕ್ತರಾಗಿ ರಕ್ಷಿತ್ ನೇಮಕ- ಸ್ನೇಹಮಯಿ ಕೃಷ್ಣ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.