18
July, 2025

A News 365Times Venture

18
Friday
July, 2025

A News 365Times Venture

ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಪರಾಧಿ : 7 ವರ್ಷ ಜೈಲುಶಿಕ್ಷೆ ಪ್ರಕಟ

Date:

ನವದೆಹಲಿ,ಮೇ,6,2025 (www.justkannada.in): ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಪ್ರಸ್ತುತ ಗಂಗಾವತಿ ಶಾಸಕರಾಗಿರುವ ಜನಾರ್ಧನ ರೆಡ್ಡಿ ಅಪರಾಧಿ  ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಿಎಸ್ ಯಡಿಯೂರಪ್ಪ ಆಡಳಿತದಲ್ಲಿ ಈ ಅಕ್ರಮ ಗಣಿಗಾರಿಕೆ ನಡೆದಿತ್ತು. ಜನಾರ್ಧನ ರೆಡ್ಡಿ ಓಬಳಾಪುರಂ ಮೈನಿಂಗ್ ಕಂಪನಿ ಮುಖ್ಯಸ್ಥರಾಗಿದ್ದರು. ಶ್ರೀನಿವಾಸರೆಡ್ಡಿ ಓಎಂಸಿ ಕಂಪನಿಯ ಎಂಡಿಯಾಗಿದ್ದರು.

ಈ ಕಂಪನಿಗೆ ಗಣಿಗಾರಿ ಮಂಜೂರಾತಿ ನೀಡುವಲ್ಲಿ ಅಕ್ರಮ ನಡೆದಿತ್ತು. ಅರಣ್ಯ ಇಲಾಖೆ ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ ಮಾಜಿ ಸಚಿವ ಜನಾರ್ಧನರೆಡ್ಡಿ ಅಪರಾಧಿ ಎಂದು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು ಇದೀಗ ಜನಾರ್ದನ ರೆಡ್ಡಿ ಮತ್ತೆ ಜೈಲುಪಾಲಾಗಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಶ್ರೀನಿವಾಸ್‌ ರೆಡ್ಡಿ ಮತ್ತು ಅಲಿ ಖಾನ್‌ಗೆ ಕೋರ್ಟ್‌ ಸೇರಿ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅವಿಭಜಿತ ಆಂಧ್ರಪ್ರದೇಶ ಗಣಿ ಸಚಿವೆಯಾಗಿದ್ದ ಸಬಿತಾ ಇಂದ್ರರೆಡ್ಡಿ, ಕೃಷ್ಣ ನಂದಾಗೆ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ.

Key words: Former minister, Janardhana Reddy, convicted , illegal mining case

The post ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಪರಾಧಿ : 7 ವರ್ಷ ಜೈಲುಶಿಕ್ಷೆ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತವರು ಕ್ಷೇತ್ರಕ್ಕೆ ಬಂಪರ್ ಯೋಜನೆ ; ಸಿದ್ದರಾಮಯ್ಯ ರಿಂದ ಚಾಲನೆ.

ಮೈಸೂರು,ಜುಲೈ,18,2025 (www.justkannada.in): ಮೈಸೂರು ನಗರ ಜನತೆಯ ಹಲವಾರು ದಿನಗಳ ಬೇಡಿಕೆ ಕಡೆಗೂ...

ಸಿಎಂ ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಿದ “ಮೆಟಾ”..!

ಬೆಂಗಳೂರು,ಜುಲೈ,18,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ...

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...