ಮೈಸೂರು,ಮಾರ್ಚ್,1,2025 (www.justkannada.in): ಮೈಸೂರು – ಹುಣಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್ ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಇಲವಾಲ ಪೊಲೀಸ್ ಠಾಣೆ ಪಿಎಸ್ಐ ಬಿ .ಆರ್.ಮಹೇಶ್ ಕುಮಾರ್ ಬಂಧಿಸಿದ್ದಾರೆ.
ಮೈಸೂರಿನ ಮೇಟಗಳ್ಳಿ ಬಡಾವಣೆ ಏಕಲವ್ಯ ನಗರದ ನಿವಾಸಿ ಪ್ರಜ್ವಲ್ (22) ಬಂಧಿತ ಯುವಕ. ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನ ಅಪ್ ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್ ಅವರು ಪ್ರಜ್ವಲ್ ಅಪ್ ಲೋಡ್ ಮಾಡಿರುವ ಫೋಟೋಗಳನ್ನ ಪತ್ತೆ ಹಚ್ಚಿದ್ದಾರೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನಲೆ ಇನ್ಸ್ ಪೆಕ್ಟರ್ ಬಿ.ಆರ್ ಮಹೇಶ್ ಕುಮಾರ್ ಗಮನಕ್ಕೆ ತಂದಿದ್ದಾರೆ.
ಕೂಡಲೇ ಎಚ್ಚೆತ್ತ ಪೊಲೀಸರು ಹೋಂಡಾ ಡಿಯೋ ವಾಹನ ನೊಂದಣಿ ಸಂಖ್ಯೆ KA-12 S5574ಯಲ್ಲಿ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಪ್ರಜ್ವಲ್ ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸ್ಟಂಟ್ಸ್ ಗೆ ಬಳಸಿದ ಹೋಂಡಾ ಡಿಯೋ ವಶಕ್ಕೆ ಪಡೆದು ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿದ್ದ ಆತಂಕವನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Key words: Boy, arrested, dangerous, stunts, mysore
The post ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಯುವಕನ ಬಂಧನ: ಹೋಂಡಾ ಡಿಯೋ ಸೀಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.