ಬೆಂಗಳೂರು,ಜೂನ್,25,2025 (www.justkannada.in): ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರದಿಂದ 2025-26 ನೇ ಶೈಕ್ಷಣಿಕ ಸಾಲಿನ ಅರೆ ವೈದ್ಯಕೀಯ ಡಿಪ್ಲೋಮ ಕೋರ್ಸ್‌ಗಿಳಿಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳು ಹಾಗೂ ರಾಜ್ಯದಲ್ಲಿನ ವಿವಿಧ ಖಾಸಗಿ ಪ್ಯಾರಾ ಮೆಡಿಕಲ್ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ(ಡಿ.ಎಂ.ಎಲ್.ಟಿ)
ಡಿಪ್ಲೋಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ(ಡಿ.ಎಂ.ಐ.ಟಿ)
ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ (ಡಿ.ಹೆಚ್.ಐ)
ಡಿಪ್ಲೋಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ(ಡಿ.ಎಂ.ಆರ್.ಟಿ)
ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ(ಡಿ.ಡಿ.ಟಿ)
ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ
ಡಿಪ್ಲೋಮಾ ಇನ್ ಆಪ್ತಾಲ್ಮೀಕ್ ಟೆಕ್ನಾಲಜಿ(ಡಿ.ಓ.ಟಿ)
ಡಿಪ್ಲೋಮಾ ಇನ್ ಡೆಂಟಲ್ ಮೆಕ್ಯಾನಿಕ್(ಡಿ.ಡಿ.ಎಂ)
ಡಿಪ್ಲೋಮಾ ಇನ್ ಡೆಂಟಲ್ ಹೈಜೀನ್ (ಡಿ.ಡಿ.ಹೆಚ್)
ಈ ಮೇಲಿನ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ವಿದ್ಯಾರ್ಹತೆ ಈ ಕೆಳಕಂಡಂತಿದೆ.
ಡಿಎಂಎಲ್ ಟಿ, ಡಿಎಂಐಟಿ, ಡಿಹೆಚ್ ಐ, ಡಿಎಂಆರ್ ಟಿ, ಡಿಡಿಟಿ, ಡಿಓಟಿ & ಎಟಿ, ಡಿಡಿಎಂ, ಡಿಡಿಎಚ್ ಕೋರ್ಸ್ ಗಳಿಗೆ ಎಸ್.ಎಸ್.ಎಲ್.ಸಿ / ಪಿ.ಯು.ಸಿ ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ವ್ಯಾಸಂಗ ಮಾಡಿರಬೇಕು.
ಹಾಗೆಯೇ ಡಿಎಂಆರ್ ಟಿಗೆ ಎಸ್.ಎಸ್.ಎಲ್.ಸಿ / ಪಿ.ಯು.ಸಿ(PCMC, PCME), ಕಾಮರ್ಸ್, ಆರ್ಟ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ.
ಅರ್ಜಿದಾರರು 1 ರಿಂದ 10ನೇ ತರಗತಿ ಅಥವಾ ಪಿಯುಸಿಯವರೆಗೆ ಕನಿಷ್ಠ 07 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ದೃಢೀಕರಣ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು.
ಕೋರ್ಸಿನ ಅವಧಿ: ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷಗಳು + 3 ತಿಂಗಳು ಇಂಟನ್ ಶಿಪ್ ಮತ್ತು ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಗೆ 3 ವರ್ಷಗಳು + 3 ತಿಂಗಳ ಇಂಟರ್‌ನ್‌ಶಿಪ್.
ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು, ಪ.ಜಾ/ಪ.ಪಂ ಹಾಗೂ ಸೇವಾನಿರತ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು.
ಅರ್ಜಿ ನಮೂನೆಗಳು: ಮಂಡಳಿಯ ಜಾಲತಾಣದಲ್ಲಿ ಲಭ್ಯವಿದ್ದು ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ತುಂಬಬೇಕಾಗಿರುತ್ತದೆ. ಅರ್ಜಿಯ ಜೊತೆ ವ್ಯಾಸಂಗ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳ ದೃಡೀಕೃತ ಪ್ರತಿಗಳನ್ನು ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.400/- ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮುಖಾಂತರವೇ ಡೆಬಿಟ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿಸುವುದು
ಅರ್ಜಿ ಸಲ್ಲಿಸುವ ದಿನಾಂಕ: ದಿನಾಂಕ: 26.06.2025 ರಿಂದ 25.07.2025 ರವರೆಗೆ ಅರ್ಜಿಯು ಮಂಡಳಿಯ ಜಾಲತಾಣದಲ್ಲಿ ಲಭ್ಯವಿರುತ್ತದೆ. 25.07.2025 ರ ನಂತರ ಯಾವುದೇ ಕಾರಣಕ್ಕೂ ಆಫ್-ಲೈನ್ ಮೂಲಕ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಗಳ ಆಯ್ಕೆ: ಅಭ್ಯರ್ಥಿಗಳನ್ನು ಅವರ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು, ಕೌನ್ಸಿಲಿಂಗ್ ನಡೆಯುವ ದಿನಾಂಕದ ಬಗ್ಗೆ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಸೂಚನಾ ಸಂದೇಶವನ್ನು ಕಳುಹಿಸಲಾಗುವುದು. ಕೌನ್ಸಿಲಿಂಗ್ ಗೆ ಹಾಜರಾಗುವ ಸಮಯದಲ್ಲಿ ಎಲ್ಲಾ ದಾಖಲೆಗಳ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸುವುದು. ತಪ್ಪಿದಲ್ಲಿ ಕೌನ್ಸಿಲಿಂಗ್ ಗೆ ಅವಕಾಶ ನೀಡಲಾಗುವುದಿಲ್ಲ. ಆನ್‌ಲೈನ್ ಮೂಲಕ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲಾಗುವುದು, ವಿದ್ಯಾರ್ಥಿಗಳ ಮೂಲ ದಾಖಲಾತಿಗಳನ್ನು ಆನ್ ಲೈನ್ ಮೂಲಕ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳು ಇಚ್ಚಿಸುವ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆಯನ್ನು ಆನ್ ಲೈನ್‌ನಲ್ಲಿ ನಮೂದಿಸಲು ಅವಕಾಶ ನೀಡಲಾಗುವುದು.
Key words: Applications, invited, para medical, diploma, courses
The post ಅರೆ ವೈದ್ಯಕೀಯ ಡಿಪ್ಲೋಮ ಕೋರ್ಸ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.