14
May, 2026

A News 365Times Venture

14
Thursday
May, 2026

A News 365Times Venture

ಅಲೆಮಾರಿ ಸಮುದಾಯದ ಪ್ರಥಮ ಮಹಿಳಾ ವಕೀಲೆಯಾಗಿ ಸಾಧನೆ ಮಾಡಿದ ಯುವತಿ

Date:

ಮೈಸೂರು,ಏಪ್ರಿಲ್,11,2026 (www.justkannada.in): ಅಲೆಮಾರಿ ಸಮುದಾಯದ ಯುವತಿ ಅರುಣ ವಕೀಲೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದು, ಸಮುದಾಯದ ಪ್ರಥಮ ಮಹಿಳಾ ವಕೀಲೆಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸಾಮಾನ್ಯವಾಗಿ ಶಿಕ್ಷಣದಿಂದ ದೂರ ಉಳಿಯುವ ಅಲೆಮಾರಿ ಸಮುದಾಯದಲ್ಲಿ ಜನಿಸಿದ ಅರುಣ, ಸವಾಲುಗಳನ್ನು ಎದುರಿಸಿ ಕಾನೂನು ಪದವಿ ಪಡೆದು ಇದೀಗ ವಕೀಲೆಯಾಗಿ ಹೊರಹೊಮ್ಮಿರುವುದು ಗಮನಾರ್ಹ. ಸಮಾಜದ ಹಿಂದುಳಿದ ವರ್ಗಗಳಿಗೆ ಪ್ರೇರಣೆಯಾಗಿರುವ ಈ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೂ ಮುಂದೆ ನ್ಯಾಯಧೀಶೆಯಾಗುವ ಮಹತ್ವಾಕಾಂಕ್ಷಿ ಗುರಿ ಹೊಂದಿರುವ ಅರುಣ, ತನ್ನ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ಈ ಸಾಧನೆಗೆ ಲಾಗೈಡ್ ಸಂಸ್ಥೆಯ ನೆರವು ಮಹತ್ವದ ಪಾತ್ರ ವಹಿಸಿದ್ದು, ಆಕೆಯ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯ ನೀಡಲಾಗಿದೆ.

ಲಾಗೈಡ್ ಸಂಸ್ಥೆಯ ವೆಂಕಟೇಶ್ ಅವರು ಅರುಣ ಮುಂದಿನ ವಿದ್ಯಾಭ್ಯಾಸಕ್ಕೂ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲೆಮಾರಿ ಸಮುದಾಯದ ಯುವತಿಗೆ ವಕೀಲೆಯ ಪಟ್ಟ ತಂದುಕೊಟ್ಟ ಅರುಣ, ಸಮಾಜದಲ್ಲಿ ಹೊಸ ದಿಕ್ಕು ತೋರಿದ ಪ್ರೇರಣೆಯ ಪ್ರತಿರೂಪವಾಗಿದ್ದಾರೆ.

Mysuru: Arun, a young woman from the nomadic community, has made history by becoming the first female lawyer from her community.

Overcoming social and economic challenges, her achievement stands as an inspiration to marginalized sections. Arun now aims to become a judge.

The Lagaid organisation played a key role by providing financial support for her higher education. Lagaid’s Venkatesh has assured continued support for her future studies.

Key words: Mysore, young woman, first, female lawyer, nomadic community

The post ಅಲೆಮಾರಿ ಸಮುದಾಯದ ಪ್ರಥಮ ಮಹಿಳಾ ವಕೀಲೆಯಾಗಿ ಸಾಧನೆ ಮಾಡಿದ ಯುವತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ : ಡಾ.ಈ.ಸಿ.ನಿಂಗರಾಜ್ ಗೌಡ.

ಮೈಸೂರು,ಮೇ,13,2026 (www.justkannada.in): ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ...

ದೇಶದ ಮಕ್ಕಳ ಭವಿಷ್ಯಕ್ಕೆ ಸೆಕ್ಯೂರಿಟಿ ಬೇಡವಾ? ಕೇಂದ್ರದ ವಿರುದ್ದ ಸಚಿವ ಮಧು ಬಂಗಾರಪ್ಪ ಗುಡುಗು

ಬೆಂಗಳೂರು,ಮೇ,13,2026 (www.justkannada.in):  ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ  ಮೇ 3 ರಂದು ನಡೆದಿದ್ದ ನೀಟ್...

ನೀಟ್ ಜವಾಬ್ದಾರಿ ರಾಜ್ಯಗಳಿಗೆ ನೀಡಿ, ನಾವೇ ಪರೀಕ್ಷೆ ಮಾಡ್ತೇವೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,13,2026 (www.justkannada.in): ರಾಜಸ್ತಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ...

ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ; ರಕ್ಷಕರೇ ಭಕ್ಷಕರಾದರೇ ಸಿದ್ದರಾಮಯ್ಯನವರೇ? ಆರ್.ಅಶೋಕ್ ಕಿಡಿ

ಬೆಂಗಳೂರು,ಮೇ,13,2026 (www.justkannada.in): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕರ್ನಾಟಕದಲ್ಲಿ ಇಂದು...