ಬೆಂಗಳೂರು,ಏಪ್ರಿಲ್,17,2026 (www.justkannada.in): ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗುಂಪು ಅಂತೀರಾ? ಅವರೇನು ಸಿಎಂ ಗುಂಪು ಅಂತಾ ಬೋರ್ಡ್ ಹಾಕಿಕೊಂಡಿದ್ದಾರಾ? ಎಂದು ಮಾಧ್ಯಮಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ತಾವು ಒಟ್ಟಿಗೆ ಪ್ರಯಾಣ ಮಾಡಿದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗರಂ ಆದ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಮತ್ತು ನಾನು ದಿನವು ಒಟ್ಟಿಗೆ ಕುಳಿತುಕೊಳ್ಳುತ್ತೇವೆ. ದಿನವೂ ಮಾತನಾಡುತ್ತೇವೆ. ಸುಮ್ಮನೆ ನೀವೇ ಭಾಗ ಮಾಡುತ್ತೀದ್ದೀರಿ ನನ್ನ ಗುಂಪು ನನ್ನ ಗುಂಪು ಅಂತೀರಾ ಎಲ್ಲಿದೆ ನಮ್ಮ ಗುಂಪು? ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಗುಂಪು ಅಂತೀರಾ ಅವರೇನು ಸಿಎಂ ಗುಂಪು ಅಂತಾ ಬೋರ್ಡ್ ಹಾಕಿಕೊಂಡಿದ್ದಾರಾ? ನನ್ನ ಗುಂಪು ಅಂತ ನಾನೇನಾದರೂ ಬೋರ್ಡ್ ಹಾಕಿಕೊಂಡಿದ್ದೀನಾ ? ಎಂದು ಕಿಡಿಕಾರಿದರು.
140 ಶಾಸಕರೂ ನನ್ನ ಮತ್ತು ಸಿಎಂ ಅವರ ಗುಂಪೇ. ಸುಮ್ಮನೇ ಗುಂಪು ಎಂದು ಹೇಳುತ್ತೀರಿ ಯಾವ ಗುಂಪು ಸಹ ಇಲ್ಲ. ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: CM, group, DCM, DK Shivakumar
The post ಅವರೇನು ಸಿಎಂ ಗುಂಪು ಅಂತಾ ಬೋರ್ಡ್ ಹಾಕಿಕೊಂಡಿದ್ದಾರಾ? ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




