ಅಹಮದಾಬಾದ್,ಜೂನ್,12,2025 (www.justkannada.in): ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮೇಘನಿ ನಗರದ ಬಳಿ ಪತನಗೊಂಡಿದ್ದು 242 ಜನರ ಪೈಕಿ 110 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಇಂದು ಅಹಮದಾಬಾದ್ ಏರ್ ಪೋರ್ಟ್ ನಿಂದ 1 ಗಂಟೆ 17 ನಿಮಿಷಕ್ಕೆ ಟೇಕಾಫ್ ಆದ 33 ನಿಮಿಷಗಳಲ್ಲಿ ಪತನವಾಗಿದ್ದು ನೆಲಕ್ಕೆ ಬೀಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇನ್ನು ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಭಾರತದ169 ಮಂದಿ ಬ್ರಿಟನ್ ನ 52 ಮಂದಿ, 6 ಪೋರ್ಚುಗಲ್ ಪ್ರಜೆಗಳು ಓರ್ವ ಕೆನಡಾ ದೇಶದ ಪ್ರಜೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ 110 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, 132 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಮಾನ ಪತನದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸುಮಿತ್ ಸಭರ್ವಾಲ್ ವಿಮಾನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಅಹಮಾದಬಾದ ಬು ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದ್ದು ಬೇರೆ ಕಡೆಗೆ ಡೈವರ್ಟ್ ಮಾಡಲಾಗಿದೆ.
Key words: Airplane, crashes ,Ahmedabad
The post ಅಹಮದಾಬಾದ್ ನಲ್ಲಿ ವಿಮಾನ ಪತನ: 110 ಮಂದಿ ಪ್ರಯಾಣಿಕರು ಸಾವು..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.