16
July, 2025

A News 365Times Venture

16
Wednesday
July, 2025

A News 365Times Venture

‘ಆಪರೇಷನ್ ಸಿಂಧೂರ್’ : ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ: 100 ಕ್ಕೂ ಹೆಚ್ಚು ಉಗ್ರರು ಫಿನೀಶ್

Date:

ಜಮ್ಮುಕಾಶ್ಮೀರ,ಮೇ,7,2025 (www.justkannada.in):  ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಉಗ್ರರ ಅಟ್ಟಹಾಸ ಮಟ್ಟಹಾಕಲು ಪಣ ತೊಟ್ಟ ಭಾರತೀಯ ಸೇನೆ ಇದೀಗ ನಿನ್ನೆ ರಾತ್ರಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು 100 ಕ್ಕೂ ಹೆಚ್ಚು ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಮಹಿಳೆಯರ ಕುಂಕುಮ ಅಳಿಸಿದ ಪ್ರತಿಕಾರಕ್ಕೆ ಆಪರೇಷನ್ ಸಿಂಧೂರ್ ಹೆಸರಿನಲ್ಲೇ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು 100 ಕ್ಕೂ ಹೆಚ್ಚು ಉಗ್ರರು ಫಿನೀಶ್ ಆಗಿದ್ದಾರೆ. ಲಷ್ಕರ್ ಎ ತೋಯ್ಬಾ, ಜೇಶ್ ಎ ಮಹಮ್ಮದ್ ಉಗ್ರ ಸಂಘಟನೆ ಕ್ಯಾಂಪ್ ಗಳ ಮೇಲೆ ಬಹವಾಲ್ಪುರ್,ಮುರಿಡ್ಕೆ ಸೇರಿದಂತೆ ಹಲವು ಕಡೆ ಇದ್ದ ಉಗ್ರರ ಕ್ಯಾಂಪ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಸಿಂಧೂರ ಕಾರ್ಯಾಚರಣೆಯಲ್ಲಿ ವಾಯ ಸೇನೆ ತೊಡಗಿದೆ.

ಉಗ್ರರ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಹಿನ್ನೆಲೆ ಪಾಕ್ ನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಶ್ರೀನರ, ಜಮ್ಮು ಕಾಶ್ಮೀರ, ಉತ್ತರ ಭಾರತದ ಕಡೆಗೆ ಹೋಗುವ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಇಂದು ದೇಶಾದ್ಯಂತ ಅಣಕು ತಾಲೀಮು

ಉಗ್ರರ ಪೋಷಣೆ ಮಾಡುವ ಪಾಕಿಸ್ತಾನಕ್ಕೆ ತಕ್ಕ ಬುದ್ದಿ ಕಲಿಸಲು ಭಾರತ ಮುಂದಾಗಿದ್ದು, 50 ವರ್ಷಗಳ ಬಳಿಕ ಯುದ್ಧಕ್ಕೆ ಸಿದ್ದತೆ  ನಡೆಸುತ್ತಿದೆ. ಇಂದು ದೇಶಾದ್ಯಂತ 259 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ರಾಜ್ಯದ ಬೆಂಗಳೂರು, ಉತ್ತರ ಕನ್ನಡ ಮತ್ತು ರಾಯಚೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಮಾಕ್‌ ಡ್ರಿಲ್ ಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ದೇಶಾದ್ಯಂತ ಯುದ್ದದ ವಾತಾವರಣ ಸೃಷ್ಠಿಯಾಗಿದೆ.

ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಮಾಕ್ ಡ್ರಿಲ್ ನಡೆಯಲಿದ್ದು  ಪ್ರಧಾನಿ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಜೊತೆ ಮಾತುಕತೆ ನಡೆಸಿದ್ದಾರೆ. 1971 ರಲ್ಲಿ ಭಾರತಾ ಪಾಕ್ ಯುದ್ದದ ಸಂದರ್ಭದಲ್ಲಿ ಮಾಕ್ ಡ್ರಿಲ್ ನಡೆದಿತ್ತು.  ಮಾಕ್ ಡ್ರಿಲ್ ಎಂದರೆ ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಠಿ. ಶತ್ರು ದಾಳಿ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು. ತಮ್ಮನ್ನ ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಅಣಕು ಕವಾಯತು ಆಗಿದೆ.

ತಡರಾತ್ರಿಯಿಂದಲೇ ಭಾರತೀಯ ವಾಯು ಸೇನೆ ಕ್ಷಿಪಣಿ ದಾಳಿ ಆರಂಭಿಸಿದ್ದು, ಪಾಕಿಸ್ತಾನಕ್ಕೆ  ಎದೆ ನಡುಕ ಶುರುವಾಗಿದ್ದು, ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಹಾತೊರೆಯುತ್ತಿದೆ. ಈಗಾಗಲೇ ಹಲವಾರು ಉಗ್ರರ ನೆಲೆಗಳ ನೆಲಸಮ ಮಾಡಿದೆ.

Key words: ‘Operation Sindoor,  Missile attack, terrorist bases, Indian Army

The post ‘ಆಪರೇಷನ್ ಸಿಂಧೂರ್’ : ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ: 100 ಕ್ಕೂ ಹೆಚ್ಚು ಉಗ್ರರು ಫಿನೀಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆ.15ರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ರೆ ಕರ್ನಾಟಕ ಬಂದ್- ಎ. ನಾರಾಯಣಸ್ವಾಮಿ

ಬೆಂಗಳೂರು,ಜುಲೈ,16,2025 (www.justkannada.in):   ಒಳ ಮೀಸಲಾತಿ ಜಾರಿಗೆ ತೀವ್ರ ವಿಳಂಬ ಮಾಡುತ್ತಿರುವ ರಾಜ್ಯ...

ಜು.19ರಂದು ಮೈಸೂರಿನಲ್ಲಿ ಸಾಧನ ಸಮಾವೇಶ: ವೇದಿಕೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಜುಲೈ,16,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ...

ಆ.5 ರಂದು KSRTC, BMTC ಸೇರಿ 4 ನಿಗಮಗಳಿಂದ ಸಾರಿಗೆ ಮುಷ್ಕರ

ಬೆಂಗಳೂರು, ಜುಲೈ, 16,2025 (www.justkannada.in): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ...

BJP ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಮತ್ತು ಮೀಸಲಾತಿ ಪರವಾಗಿ ಇಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ,...