15
July, 2025

A News 365Times Venture

15
Tuesday
July, 2025

A News 365Times Venture

“ಆಪರೇಷನ್ ಸಿಂಧೂರ್” ಟೀಕಿಸಿದ ವಿಶ್ವವಿದ್ಯಾಲಯದ ಪ್ರೊಫೆಸರ್ ಅಮಾನತು..!

Date:

ಚೆನ್ನೈ, ಮೇ.೦೯,೨೦೨೫: ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ  “ ಆಪರೇಷನ್ ಸಿಂಧೂರ್” ಅನ್ನು ಟೀಕಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಸಹಾಯಕ ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ.

ಚೆನ್ನೈ ಬಳಿಯ ಖಾಸಗಿ ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ವೃತ್ತಿ ಕೇಂದ್ರದ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಸಹಾಯಕ ಪ್ರಾಧ್ಯಾಪಕ ಎಸ್ ಲೋರಾ ಅವರು ನಾಗರಿಕರ ಸಾವುನೋವುಗಳ ಬಗ್ಗೆ ತಮ್ಮ ವಾಟ್ಸಾಪ್ನಲ್ಲಿ ಸ್ಟೇಟಸ್ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು.

“ಬುಧವಾರ ಮುಂಜಾನೆ ನಡೆದ ದಾಳಿಯಲ್ಲಿ ಭಾರತವು ಪಾಕಿಸ್ತಾನದಲ್ಲಿ ಮಗುವನ್ನು ಕೊಂದಿದೆ ಮತ್ತು ಇಬ್ಬರು ನಾಗರೀಕರನ್ನು ಗಾಯಗೊಳಿಸಿದೆ” ಎಂದು ಅವರು ತಮ್ಮ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.

“ನಿಮ್ಮ ಸ್ವಂತ ರಕ್ತಪಾತಕ್ಕಾಗಿ ಮತ್ತು ನಿಮ್ಮ ಚುನಾವಣಾ ಸ್ಟಂಟ್ಗಳಿಗಾಗಿ ಮುಗ್ಧ ಜೀವಗಳನ್ನು ಕೊಲ್ಲುವುದು ಧೈರ್ಯವಲ್ಲ ಮತ್ತು ಅದು ನ್ಯಾಯವಲ್ಲ. ಇದು ಹೇಡಿತನದ ಕೃತ್ಯ!” ಎಂದು ಅವರು ಸ್ಟೇಟಸ್ಸ್‌ ನಲ್ಲಿ ಬರೆದುಕೊಂಡಿದ್ದರು. ಲಾಕ್ಡೌನ್ ಮತ್ತು ಆಹಾರ ಕೊರತೆಯಂತಹ ಅನಿಶ್ಚಿತತೆಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದರು.

ಪೋಸ್ಟ್ನ ಸ್ಕ್ರೀನ್ಶಾಟ್ಗಳನ್ನು ಎಕ್ಸ್  ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ, ಖಾಸಗಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಸ್ ಪೊನ್ನುಸಾಮಿ,  ಲೋರಾ ವಿರುದ್ಧ ಅಮಾನತು ಆದೇಶ ಹೊರಡಿಸಿದರು.

“ಶ್ರೀಮತಿ ಲೋರಾ ಅವರು ಭಾರತ ವಿರೋಧಿ ಧೋರಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ, ವಿಚಾರಣೆ ಬಾಕಿ ಇದೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಜತೆಗೆ ಆಕೆಯ ಬೋಧನಾ ಪ್ರೊಫೈಲ್ ಅನ್ನು ಎಸ್ಆರ್ಎಂ ವೆಬ್ಸೈಟ್ನಿಂದ ತೆಗೆದುಹಾಕಲಾಗಿದೆ. ಅವರು ಪ್ರಸ್ತುತ ಐರಿಶ್ ಪುರಾಣದಲ್ಲಿ ಡಾಕ್ಟರೇಟ್ ಸಂಶೋಧನೆಯನ್ನು ಮುಂದುವರಿಸುತ್ತಿದ್ದಾರೆ ಎಂದು ವೆಬ್ಸೈಟ್ ಹೇಳಿದೆ.

ಅವರು 2016 ರಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿದ್ದರು ಮತ್ತು 2017 ರಲ್ಲಿ ಇಂದಿರಾ ಗಾಂಧಿ ಬೋಧನಾ ಶ್ರೇಷ್ಠತೆ ಪ್ರಶಸ್ತಿಯನ್ನು ಪಡೆದಿದ್ದರು. ಇವರಿಗೆ 11 ವರ್ಷಗಳ ಭೋದನ ಅನುಭವವಿದೆ.

ಕೃಪೆ: ಎಚ್.ಟಿ

key words: University, professor, suspended, criticising, ‘Operation Sindhur’, SRM

vtu

SUMMARY:

University professor suspended for criticising ‘Operation Sindhur’. “Ms Lora has been suspended with immediate effect for her involvement in anti-India attitude activities, pending an inquiry,” said in a statement.  Her teaching profile has also been removed from the SRM website.

 

The post “ಆಪರೇಷನ್ ಸಿಂಧೂರ್” ಟೀಕಿಸಿದ ವಿಶ್ವವಿದ್ಯಾಲಯದ ಪ್ರೊಫೆಸರ್ ಅಮಾನತು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ

ಮೈಸೂರು,ಜುಲೈ,15,2025 (www.justkannada.in): ಜುಲೈ 19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ರಾಜ್ಯ...

ರೈತರ ಜಮೀನು ಭೂ ಸ್ವಾಧೀನ ಕೈ ಬಿಟ್ಟ ಸರಕಾರ: ಸಿಎಂ ಘೋಷಣೆ.

ಬೆಂಗಳೂರು,ಜುಲೈ,15,2025 (www.justkannada.in): ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು  ದೇವನಹಳ್ಳಿ ತಾಲೂಕು...

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾಗಿ ಚರ್ಚಿಸಿದ ಸಂಸದ ಯದುವೀರ್‌

ಮೈಸೂರು, ಜುಲೈ, 14,2025 (www.justkannada.in):  ಕೇಂದ್ರ ಗೃಹ ಸಚಿವ ಅಮಿತ್‌ ಶಾ...

Mysore Dasara: ಅಭಿಮನ್ಯು @59, ಅಂಬಾರಿ ಹೊರೋದು ಇದೇ ಕಡೆನಾ…?

ಮೈಸೂರು,ಜುಲೈ,15,2025 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಒಂದುವರೆ ತಿಂಗಳು...