ಮೈಸೂರು,ಜೂನ್,11,2025 (www.justkannada.in): ಆರ್ಗ್ಯಾನಿಕ್ ಕೆಮಿಕಲ್ ಸೊಸೈಟಿಯು ತನ್ನ ವಾರ್ಷಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಾವಯವ ರಸಾಯನ ಶಾಸ್ತ್ರ ವಿಭಾಗದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರಿಗೆ ರಸಾಯನಶಾಸ್ತ್ರದಲ್ಲಿನ ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಐಐಟಿ ಗುವಾಹಟಿ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಭೀಷ್ಮ ಕೆ. ಪಟೇಲ್ ಅವರು ಸಾವಯವ ರಸಾಯನ ಶಾಸ್ತ್ರದಲ್ಲಿನ ಪ್ರಚಲಿತ ಸಂಶೋಧನಾ ವಿದ್ಯಮಾನಗಳನ್ನು ವಿವರಿಸಿ ಉಪನ್ಯಾಸ ನೀಡಿದರು.
ಆರ್ಗಾನಿಕ್ ಕೆಮಿಕಲ್ ಸೊಸೈಟಿಯ ಅಧ್ಯಕ್ಷ ಪ್ರೊ.ಬಸಪ್ಪ ಮಾತನಾಡಿ, ಕಾರ್ಯಕ್ರಮದುದ್ದಕ್ಕೂ ಸಕ್ರಿಯವಾಗಿ ಭಾಗವಹಿಸಿ ಬೆಂಬಲ ನೀಡಿದ ಉಪನ್ಯಾಸಕರು, ಹಾಜರಿದ್ದವರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ಸಹಭಾಗಿತ್ವ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಿತು.
ಈ ಸಮಾರಂಭದಲ್ಲಿ ರಸಾಯನಶಾಸ್ತ್ರಜ್ಞರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾವಯವ ರಸಾಯನಶಾಸ್ತ್ರ ಕ್ಷೇತ್ರದ ವೃತ್ತಿಪರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ಕೆ. ಎನ್. ಮೋಹನ್, ಪ್ರೊ. ಕೆ.ಮಂಟೇಲಿಂಗು, ಪ್ರೊ. ಸದಾಶಿವ, ಪ್ರೊ. ಪ್ರಿಯ, ಡಾ.ಪ್ರೀತಂ, ಡಾ. ಡಿ.ಎಂ.ಗುರುದತ್ತ, ಡಾ. ಸ್ವರೂಪ್, ಸ್ಪಂದನ, ಮತ್ತು ಗುಣಶ್ರೀ ಉಪಸ್ಥಿತರಿದ್ದರು.
Key words: Organic Chemical Society, Annual Program, Prof. K.S. Rangappa, felicitated
The post ಆರ್ಗ್ಯಾನಿಕ್ ಕೆಮಿಕಲ್ ಸೊಸೈಟಿ ವಾರ್ಷಿಕ ಕಾರ್ಯಕ್ರಮ: ಪ್ರೊ.ಕೆ.ಎಸ್ ರಂಗಪ್ಪರಿಗೆ ಸನ್ಮಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.