ಮೈಸೂರು,ಜೂನ್,25,2025 (www.justkannada.in): ಆಷಾಢ ಮಾಸ ವಿಶೇಷವಾದ ಮಾಸವಾಗಿದ್ದು ನಾಲ್ಕು ಶುಕ್ರವಾರದಲ್ಲೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ, ಪೂಜೆ ಹೋಮ ಹವನ ನೆರವೇರಿಸಲಾಗುತ್ತದೆ ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿ ಮಾಹಿತಿ ನೀಡಿದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶಕ್ತಿ ದೇವತೆಗಳ ಆರಾಧನೆ ಹೆಚ್ಚು ಇರುತ್ತದೆ. ಮೈಸೂರಿನಲ್ಲಿ ಹಲವು ಶಕ್ತಿ ದೇವತೆಗಳಾರಾಧನೆ ನಡೆಯುತ್ತದೆ. ತ್ರಿನೇಶ್ವರಿ,ತ್ರಿಪುರ ಸುಂದರಿ, ಕಾಮ ಕಾಮೇಶ್ವರಿ ದೇವಾಲಯಗಳು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ. ಅದರಂತೆ ಚಾಮುಂಡಿ ಬೆಟ್ಟದಲ್ಲೂ ಆಷಾಡ ಮಾಸದ ನಾಲ್ಕು ಶುಕ್ರವಾರ ದೇವಿಗೆ ವಿಶೇಷ ಅಭಿಷೇಕ,ಪೂಜೆ,ಹೋಮ,ಹವನಗಳು ನಡೆಯುತ್ತವೆ ಎಂದು ತಿಳಿಸಿದರು.
ಮುಂಜಾನೆ 3:30 ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ನಾಲ್ಕು ವಾರ ತಾಯಿ ಚಾಮುಂಡೇಶ್ವರಿ ಅಮ್ಮನವರು ಲಕ್ಷ್ಮಿ ಅಲಂಕಾರದಲ್ಲಿರುತ್ತಾರೆ. ಜುಲೈ17 ಕ್ಕೆ ಅಮ್ಮನವರ ವರ್ದಂತಿ ಮಹೋತ್ಸವ ಜರುಗಲಿದ್ದು, ವರ್ಧಂತಿ ದಿನದಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಇರುತ್ತದೆ. ಪ್ರತಿ ಶುಕ್ರವಾರ ಮುಂಜಾನೆ 3:30 ಕ್ಕೆ ಪೂಜೆ ಆರಂಭವಾಗುತ್ತದೆ. ನಾಲ್ಕೂ ವಾರವೂ ತಾಯಿ ಜಗನ್ಮಾತೆ ಲಕ್ಷ್ಮಿ ಅಲಂಕಾರದಲ್ಲಿ ಇರಿತ್ತಾಳೆ ಎಂದು ಶಶಿ ಶೇಖರ್ ದೀಕ್ಷಿತ್ ತಿಳಿಸಿದರು.
Key words: Ashadha, Chamundi Hills , Chief Priest, Sasishekhar Dixit
The post ಆಷಾಢ ಮಾಸ: ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ, ಪೂಜೆ ಹೋಮ ಹವನ- ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.