ಮೈಸೂರು,ಜೂನ್,9,2025 (www.justkannada.in): ಕಾಲ್ತುಳಿತ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿಗಳನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರತಾಪ್ ಸಿಂಹ, ಇಷ್ಟು ದಿನ ಹಿಂದೂ ವಿರೋಧಿ ಆಗಿದ್ದ ಸಿಎಂ ಸಿದ್ದರಾಮಯ್ಯ ಈಗ ಪೊಲೀಸ್ ಇಲಾಖೆ ವಿರೋಧಿ ಆಗಿದ್ದಾರೆ. ಹಿಂದುಳಿದವರ ಉದ್ಧಾರಕ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯದ ನಿಷ್ಠಾವಂತ ಅಧಿಕಾರಿ ದಯಾನಂದ್ ರನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ. ದಯಾನಂದ್ ಒಬ್ಬ ಸಮರ್ಥ ನಿಷ್ಠಾವಂತ ಅಧಿಕಾರಿ. ನಾಯಕ ಸಮುದಾಯದ ವ್ಯಕ್ತಿ ಮೇಲೆ ನಿಮಗೆ ಯಾಕೆ ಇಷ್ಟು ಕೋಪ. ಪೊಲೀಸ್ ಇಲಾಖೆ ಅನ್ ಫಿಟ್ ಅಲ್ಲ ಸರ್ಕಾರ ಅನ್ ಫಿಟ್ ಎಂದು ಹರಿಹಾಯ್ದರು.
ಘಟನೆ ನಡೆದು ಒಂದು ವಾರವಾದರೂ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತಿಲ್ಲ. ಸಿಎಂ ನಾಲ್ಕು ಹನಿ ಕಣ್ಣೀರು ಹಾಕಿಲ್ಲ. ಅನುಕಂಪ, ಪಶ್ಚಾತ್ತಾಪದ ಮಾತು ಬಂದಿಲ್ಲ. ಕಾಲ್ತುಳಿತದ ವಿಚಾರ ಎರಡು ಗಂಟೆ ತಡವಾಗಿ ಗೊತ್ತಾಯಿತು ಎನ್ನುವುದಾದರೆ ನೀವು ರಾಜ್ಯ ಹೇಗೆ ಸಂಬಾಳಿಸುತ್ತೀರಿ? ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ರನ್ನು ಯಾಕೆ ತೆಗೆದು ಹಾಕಿದ್ರಿ. ಮೊದಲು ಈ ರಹಸ್ಯ ಬಿಚ್ಚಿಡಿ ಎಂದು ಆಗ್ರಹಿಸಿದರು.
ಸತ್ಯವತಿ ಅವರನ್ನು ಇನ್ನೂ ನೀವು ಸಂಸ್ಪೆಡ್ ಮಾಡಿಲ್ಲ
ಸಿಎಂ ತಮ್ಮ ಮೊಮ್ಮಗನಿಗೆ ಫೋಟೋಗ್ರಾಫ್, ಆಟೋಗ್ರಾಫ್ ಕೊಡಿಸಲು ಓಡುತ್ತಿದ್ದರೇನೋ. ಅದಕ್ಕೆ ಕಾಲ್ತುಳಿತ ವಿಚಾರ ಗೊತ್ತಾಗಿಲ್ಲ. ಸತ್ಯವತಿ ಯಾಕೆ ಒತ್ತಡ ಹೇರಿ ಕಾರ್ಯಕ್ರಮ ಮಾಡಿಸಿದರು. ಯಾಕೆ ಅವರನ್ನು ಇನ್ನೂ ನೀವು ಸಂಸ್ಪೆಡ್ ಮಾಡಿಲ್ಲ. ಯಾಕೆ ಅವರನ್ನು ರಕ್ಷಣೆ ಮಾಡುತ್ತಿದ್ದಿರಿ? ಸತ್ಯವತಿ ಅವರು ಯಾಕೆ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಅಂತಾ ಹೇಳಿದ್ರು? ಸಿಎಂ ಸಿದ್ದರಾಮಯ್ಯಗೆ ಆಡಳಿತದ ಲಂಗು ಲಗಾಮು ಸಿಕ್ತಿಲ್ಲ. 11 ಜನರ ಸಾವಿಗೆ ಕಣ್ಣೀರು ಹಾಕಿ ಅವರ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳ ಬೇಕಾದ ಸಿಎಂ ಮದ್ವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಸಿಎಂ ಅವರೇ ನಿಮಗೆ ಮದ್ವೆ ಊಟ, ಬೀಗರ ಊಟನೇ ಮುಖ್ಯನಾ? ಸಂವೇದನ ರಹಿತ ವ್ಯಕ್ತಿ ಸಿಎಂ. ವಿಧಾನಸೌಧಕ್ಕೆ ನೀವು ಸಿಎಂ ಅನ್ನುವುದಾದರೆ ನೀವು ಒಬ್ಬ ಸಿಎಂ ಅಲ್ಲ. ಈ ರಾಜ್ಯವನ್ನು ಅಧಿಕಾರಿಗಳಿಗೆ ಬರೆದು ಕೊಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
Key words: CM Siddaramaiah, anti-Police Department, Prathap Simha
The post ಇಷ್ಟು ದಿನ ಹಿಂದೂ ವಿರೋಧಿಯಾಗಿದ್ದ ಸಿಎಂ ಈಗ ಪೊಲೀಸ್ ಇಲಾಖೆ ವಿರೋಧಿ –ಪ್ರತಾಪ್ ಸಿಂಹ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.