ಹರಿಯಾಣ, ಏಪ್ರಿಲ್ 14,2025 (www.justkannada.in) ಈ ಹಿಂದೆ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ವಕ್ಫ್ ಕಾನೂನು ರೂಪಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಹರ್ಯಾಣದ ಹಿಸಾರ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದೆ ಸಂವಿಧಾನದ ಮೂಲ ಆಶಯವನ್ನು ಹಾಳು ಮಾಡುವಂತೆ ವಕ್ಫ್ ಕಾನೂನನ್ನು ಕಾಂಗ್ರೆಸ್ ರೂಪಿಸಿತ್ತು. ಕಾಂಗ್ರೆಸ್ 2013 ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ತೃಪ್ತಿಪಡಿಸಿಕೊಳ್ಳಲು ತರಾತುರಿಯಲ್ಲಿ ತಿದ್ದುಪಡಿಗಳನ್ನು ಮಾಡಿತ್ತು. ಕಾಂಗ್ರೆಸ್ ಕೆಲವು ಮೂಲಭೂತವಾದಿಗಳನ್ನು ಮಾತ್ರ ಸಂತೋಷಪಡಿಸಿದೆ. ಉಳಿದ ಸಮಾಜವು ಶೋಚನೀಯ, ಅವಿದ್ಯಾವಂತ ಮತ್ತು ಬಡವರಾಗಿಯೇ ಉಳಿಯಿತು. ಕಾಂಗ್ರೆಸ್ಸಿನ ಈ ದುಷ್ಟ ನೀತಿಗೆ ದೊಡ್ಡ ಪುರಾವೆ ವಕ್ಫ್ ಕಾಯ್ದೆ ಎಂದು ಕಿಡಿಕಾರಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರನ್ನ ಪದೇ ಪದೇ ಅವಮಾನಿಸಿದ್ದು ಕಾಂಗ್ರೆಸ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಪದೇ ಪದೇ ಅವಮಾನಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ್ದನ್ನು ನಾವು ಎಂದಿಗೂ ಮರೆಯಬಾರದು. ಅವರು ಬದುಕಿದ್ದಾಗ ಕಾಂಗ್ರೆಸ್ ಪಕ್ಷವು ಅವರನ್ನು ಪದೇ ಪದೇ ಅವಮಾನಿಸಿತು. ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರು. ಕಾಂಗ್ರೆಸ್ ಅವರನ್ನು ಪದಚ್ಯುತಗೊಳಿಸಲು ಬಯಸಿತ್ತು ಎಂದು ಪ್ರಧಾನಿ ಮೋದಿ ಹರಿಹಾಯ್ದರು.
Key words: Congress, Waqf law, Dr. BR Ambedkar, PM Modi
The post ಈ ಹಿಂದೆ ಡಾ.ಬಿ.ಆರ್ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ವಕ್ಫ್ ಕಾನೂನು ರೂಪಿಸಿದ್ದು ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.