11
July, 2026

A News 365Times Venture

11
Saturday
July, 2026

A News 365Times Venture

ಉನ್ನತ ಮಟ್ಟದ ಸಭೆ: ಅ.11ಕ್ಕೆ ಮೈಸೂರು ದಸರಾ ಉದ್ಘಾಟನೆ, ಅ.21ಕ್ಕೆ ಜಂಬೂಸವಾರಿ

Date:

ಬೆಂಗಳೂರು,ಜುಲೈ,10,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಿದ್ದತೆ ಆರಂಭಿಸಿದ್ದು ಈ ನಡುವೆ ಅಕ್ಟೋಬರ್ 11 ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ  ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ದಸರಾ ಉದ್ಘಾಟನೆ, ಜಂಬೂಸವಾರಿ ಮೆರವಣಿಗೆ ದಿನಾಂಕ ಸಮಯ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ.

ಅದರಂತೆ  ಅಕ್ಟೋಬರ್ 11ರಂದು ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಉದ್ಘಾಟನೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂದು  ಬೆಳಿಗ್ಗೆ 11.50ಕ್ಕೆ ಶುಭ ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ ದೊರೆಯಲಿದೆ.

ಇನ್ನು ಅಕ್ಟೋಬರ್ 21 ರಂದು ಮೈಸೂರು ದಸರಾ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು ಅಂದು ಸಂಜೆ 4.10ರಿಂದ 4.35ರ ನಡುವೆ ತಾಯಿ ಚಾಮುಂಡೇಶ್ವರಿಗೆ ಸಿಎಂ  ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ಸಿಗಲಿದೆ.

Key words: High-level, meeting, Mysore Dasara, inauguration, Jambu Savari

The post ಉನ್ನತ ಮಟ್ಟದ ಸಭೆ: ಅ.11ಕ್ಕೆ ಮೈಸೂರು ದಸರಾ ಉದ್ಘಾಟನೆ, ಅ.21ಕ್ಕೆ ಜಂಬೂಸವಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ವಿವಿಯ SC, ST ಸಂಶೋಧಕರಿಗೆ ಶಿಷ್ಯವೇತನ: ಬಿಕ್ಕಟ್ಟು ಬಗೆಹರಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಜುಲೈ,10,2026 (www.justkannada.in):  ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2026-27ನೇ ಸಾಲಿನಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ...

SIR ದುರುಪಯೋಗಕ್ಕಾಗಿ ಸಿಎಂ ಡಿಕೆಶಿ ಪ್ರವಾಸ, ವಿಭಾಗವಾರು ಸಭೆ – ಕೇಂದ್ರ ಸಚಿವ HDK ಆರೋಪ

ಬೆಂಗಳೂರು,ಜುಲೈ,10,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ‍ಪ್ರವಾಸ ಕೈಗೊಂಡಿರುವುದು, ವಿಭಾಗವಾರು ಸಭೆ...

ನಾಳೆ ರಾಷ್ಟೀಯ ಲೋಕ ‍ಅದಾಲತ್‍

ಮಂಡ್ಯ,ಜುಲೈ,10,2026 (www.justkannada.in): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ  ರಾಜ್ಯಾದ್ಯಂತ...

ಅಮಿತ್ ಶಾ ವೈಫಲ್ಯ ಅಂತಾ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಿ- ಬಿ.ಕೆ ಹರಿಪ್ರಸಾದ್ ತಿರುಗೇಟು

ಬೆಂಗಳೂರು,ಜುಲೈ,10,2026 (www.justkannada.in): ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಕರ್ನಾಟಕ ಶಾಶ್ವತ...