ಕೋಲಾರ,ಮಾರ್ಚ್,5,2025 (www.justkannada.in): ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಸರ್ವೇ ನಂಬರ್ 1 ಮತ್ತು 2 ರಲ್ಲಿ ಅರಣ್ಯ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಬಾರಿ ಜಮೀನು ಜಂಟಿ ಸರ್ವೇ ಆಗಿದೆ, ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ ಅಂತಾ ಬಂದಿದೆ. ಒಂದು ಗುಂಟೆ ಜಮೀನನ್ನೂ ನಾನು ಕಬಳಿಸಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ವಕೀಲ ಶಿವಾರೆಡ್ಡಿ ರಿಟ್ ಪಿಟಿಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಮಾತನಾಡಿದ ರಮೇಶ್ ಕುಮಾರ್, ಇಷ್ಟುದಿನ ನೋಡಿದ್ದು ಬರೀ ಟ್ರಯಲ್, ಇನ್ಮೇಲೆ ಅಸಲೀ ಪಿಕ್ಚರ್ ಬರುತ್ತೆ ಚೌಡೇಶ್ವರಿ ತಾಯಿ ಆಣೆಗೂ ನಾನು ಅರಣ್ಯ ಜಮೀನು ಕಬಳಿಸಿಲ್ಲ ಎಂದರು.
4 ಬಾರಿ ಜಮೀನು ಜಂಟಿ ಸರ್ವೇ ಆಗಿದೆ, ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ, ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ದೇವರು ಒಳ್ಳೆಯದು ಮಾಡಲಿ. ಅರಣ್ಯ ಇಲಾಖೆಗೆ ಸೇರಿದ ಒಂದು ಗುಂಟೆ ಜಮೀನು ನಾನು ಕಬಳಿಸಿಲ್ಲ. ಶ್ರೀನಿವಾಸಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.
Key words: Forest land, encroachment case, Ramesh Kumar
The post ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ: ಒಂದು ಗುಂಟೆ ಜಮೀನನ್ನೂ ನಾನು ಕಬಳಿಸಿಲ್ಲ- ರಮೇಶ್ ಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.