11
July, 2026

A News 365Times Venture

11
Saturday
July, 2026

A News 365Times Venture

ಎಸ್. ಜಾನಕಿ ಸ್ಮರಣಾರ್ಥ KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ .

Date:

 

ಮೈಸೂರು, ಜುಲೈ 11: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಪ್ರತಿಮ ಗಾಯನದ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯ ಗೆದ್ದ ಗಾನ ಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ಕುಲಪತಿ ಪ್ರೊ. ಎ.ಪಿ. ಜ್ಞಾನ ಪ್ರಕಾಶ್ (Prof Gnana Prakash) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಸ್ಟ್‌ ಕನ್ನಡ ಜತೆ ಮಾತನಾಡಿದ ಅವರು, “ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಎಸ್. ಜಾನಕಿ ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ನೋವು ತಂದಿದೆ. ಅವರ ಕಂಠಸಿರಿ, ಗಾಯನ ವೈಭವ ಮತ್ತು ಸಂಗೀತ ಪರಂಪರೆ ಮುಂದಿನ ಪೀಳಿಗೆಗಳಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ‘ಎಸ್. ಜಾನಕಿ ಸ್ಮಾರಕ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ’ ಸ್ಥಾಪಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು” ಎಂದು ತಿಳಿಸಿದರು.

ಜಾನಕಿ ಅವರು ಕೇವಲ ಗಾಯಕಿಯಷ್ಟೇ ಅಲ್ಲ, ಭಾರತೀಯ ಸಂಗೀತ ಲೋಕದ ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿದ್ದರು. ಅವರ ಸಾವಿರಾರು ಹಾಡುಗಳು ಭಾಷೆ, ಕಾಲ ಮತ್ತು ತಲೆಮಾರುಗಳ ಗಡಿಗಳನ್ನು ಮೀರಿ ಸಂಗೀತ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಕನ್ನಡ ಚಿತ್ರರಂಗದ ಸುವರ್ಣಯುಗದ ಅನೇಕ ಅಮರ ಗೀತೆಗಳಿಗೆ ಅವರು ತಮ್ಮ ಕಂಠದ ಮೂಲಕ ಜೀವ ತುಂಬಿದ್ದರು ಎಂದು ಸ್ಮರಿಸಿದ್ದಾರೆ.

ಪ್ರಸ್ತಾವಿತ ಕೇಂದ್ರದಲ್ಲಿ ಜಾನಕಿ ಅವರ ಅಪರೂಪದ ಹಾಡುಗಳು, ಸಂದರ್ಶನಗಳು, ಧ್ವನಿಮುದ್ರಣಗಳು, ಸಂಗೀತ ದಾಖಲೆಗಳು ಹಾಗೂ ಸಂಶೋಧನಾ ಸಾಮಗ್ರಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಸಂರಕ್ಷಿಸುವ ಯೋಜನೆ ರೂಪಿಸಲಾಗುವುದು. ಜೊತೆಗೆ ಸಂಗೀತ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಯುವ ಗಾಯಕ-ಗಾಯಕಿಯರಿಗೆ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಇದೆ ಎಂದರು.

“ಜಾನಕಿ ಅವರ ಗಾಯನ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ. ಅವರ ಧ್ವನಿ ಎಂದೆಂದಿಗೂ ಅಮರವಾಗಿರಲಿದೆ” ಎಂದು ಪ್ರೊ. ಜ್ಞಾನ ಪ್ರಕಾಶ್ ನುಡಿನಮನ ಸಲ್ಲಿಸಿದ್ದಾರೆ ̤

Key words: Karnataka State Open University, KSOU, Vice-Chancellor, Prof Gnana Prakash deep condolences, demise, legendary playback singer, S. Janaki.

vtu

SUMMARY: 

Mysuru, July 11: Karnataka State Open University (KSOU) Vice-Chancellor Prof Gnana Prakash has expressed deep condolences over the demise of legendary playback singer S. Janaki.

He said that S. Janaki, who sang the highest number of songs in Kannada and earned a permanent place in the hearts of Kannadigas, leaves behind an unparalleled musical legacy.

“To keep her melodious voice and rich musical heritage alive for future generations, KSOU will consider establishing an ‘S. Janaki Memorial Centre for Music Studies and Digital Archive’. Preserving and promoting her contribution to music will be the true tribute to the legendary singer,” Prof Gnana Prakash stated.

The proposed centre is expected to document, preserve, and promote S. Janaki’s vast body of work for research, learning, and future generations.

The post ಎಸ್. ಜಾನಕಿ ಸ್ಮರಣಾರ್ಥ KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ . appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಅಧ್ಯಕ್ಷರ ವಿರುದ್ದ ರಾಜ್ಯಪಾಲರಿಂದ ಕ್ರಮ ಆಗಬೇಕು- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,11,2026 (www.justkannada.in): ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಪುತ್ರಿ ವಿರುದ್ದ ಎಫ್...

ಲೋಕ ಅದಾಲತ್‌ ನಲ್ಲಿ ಮಾನವೀಯತೆ: ವಿಕಲಚೇತನ ವ್ಯಕ್ತಿಯ 8 ಲಕ್ಷ ರೂ. ಬ್ಯಾಂಕ್ ಸಾಲ ಕೇವಲ 15,000 ರೂ.ಗೆ ಇತ್ಯರ್ಥ!

​ಚಿಕ್ಕಮಗಳೂರು,ಜುಲೈ,11,2026 (www.justkannada.in):  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ  ಹಮ್ಮಿಕೊಂಡಿದ್ದ ಮೆಗಾ...

435 ಕಿ.ಮೀ ಫುಟ್ ಪಾತ್ ಒತ್ತುವರಿ ತೆರವು: ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜುಲೈ,10,2026 (www.justkannada.in): ಜುಲೈ 1ರಿಂದ ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರುವು...

ಮೈಸೂರು ವಿವಿಯ SC, ST ಸಂಶೋಧಕರಿಗೆ ಶಿಷ್ಯವೇತನ: ಬಿಕ್ಕಟ್ಟು ಬಗೆಹರಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಜುಲೈ,10,2026 (www.justkannada.in):  ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2026-27ನೇ ಸಾಲಿನಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ...