6
October, 2026

A News 365Times Venture

6
Tuesday
October, 2026

A News 365Times Venture

ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ಸನ್ಮಾನ: 8 ಪದಕ ವಿಜೇತರಿಗೆ ನಗದು ಬಹುಮಾನ ಘೋಷಣೆ

Date:

ಬೆಂಗಳೂರು, ಅಕ್ಟೋಬರ್,06,2026 (www.justkannada.in) ಏಷ್ಯನ್ ಗೇಮ್ಸ್ 2026ರಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ರಾಜ್ಯದ ಕ್ರೀಡಾಪಟುಗಳನ್ನು ಸಿಎಂ‌ ಡಿ ಕೆ‌ ಶಿವಕುಮಾರ್ ‌ಅವರು ವಿಧಾ‌ನಸೌಧದಲ್ಲಿ ಮಂಗಳವಾರ ಸನ್ಮಾನಿಸಿದರು. 8 ಪದಕ ವಿಜೇತರಿಗೆ ಒಟ್ಟು 8 ಕೋಟಿ ರೂ. ನಗದು ಬಹುಮಾನ ಘೋಷಿಸಿದರು.

ಪದಕ ವಿಜೇತರು ಸೇರಿದಂತೆ ಏಷ್ಯನ್ ಗೇಮ್ಸ್‌ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು.

ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ 5 ಲಕ್ಷ ರೂ. ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಎಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗಗಳ ಕ್ರೀಡಾಪಟುಗಳು ಇದರ ಫಲಾನುಭವಿಗಳಾಗಿದ್ದಾರೆ.

ಪದಕ ವಿಜೇತರ ಬಹುಮಾನ ಮೊತ್ತ ಹೆಚ್ಚಳ

ಏಷ್ಯನ್ ಗೇಮ್ಸ್‌ ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನೂ ಸಿಎಂ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರೂ.,ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನೀಡಲಾಗುತ್ತಿತ್ತು. ಸಿಎಂ ಡಿ ಕೆ‌ ಶಿವಕುಮಾರ್ ಅವರು ಚಿನ್ನದ ಪದಕಕ್ಕೆ 1 ಕೋಟಿ ರೂ., ಬೆಳ್ಳಿ ಪದಕಕ್ಕೆ 75 ಲಕ್ಷ ಹಾಗೂ ಕಂಚಿನ ಪದಕಕ್ಕೆ 50 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದ್ದಾರೆ.

ಕ್ರೀಡಾಪಟುಗಳಿಗೆ ನೇರ ನೇಮಕಾತಿ ಅವಕಾಶ

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಕೈಗೊಳ್ಳಲಾಗುವುದು.

ಒಲಿಂಪಿಕ್ಸ್ ತಯಾರಿಗೆ ತಲಾ 10 ಲಕ್ಷ

ಮುಂದಿನ ಹಂತದಲ್ಲಿ ಒಲಿಂಪಿಕ್ಸ್‌ ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ನೆರವು ನೀಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ‘ಗುರಿ ಒಲಿಂಪಿಕ್ಸ್’ ಯೋಜನೆಗೆ 2026-27ನೇ ಸಾಲಿಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ತಯಾರಿಗಾಗಿ ತಲಾ 10 ಲಕ್ಷ ರೂ. ನಗದು ಪ್ರೋತ್ಸಾಹಧನವನ್ನು ಇವರಿಗೆ ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ

ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ 2% ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಮತ್ತು ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಕುರಿತು ಅಕ್ಟೋಬರ್ 3, 2026 ರಂದು ಅಧಿಸೂಚನೆ ಹೊರಡಿಸಲಾಗಿದೆ.

ಪದಕ ವಿಜೇತ 08 ಕ್ರೀಡಾಪಟುಗಳ ವಿವರ ಹಾಗೂ ಬಹುಮಾನ ಮೊತ್ತ:

ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್ ಮಹಿಳಾ ತಂಡ, ಚಿನ್ನ), ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್ 4×400 ಮಿಶ್ರ ರಿಲೇ, 4×400 ಮಹಿಳಾ ರಿಲೇ ಬೆಳ್ಳಿ ಮತ್ತು ಚಿನ್ನ)

ತಿಲೋತ್ತಮ ಸೇನ್ (ಶೂಟಿಂಗ್, ಮಹಿಳೆಯರ 50 ಮೀ ರೈಫಲ್, ಬೆಳ್ಳಿ)

ಆಯುಷ್ ಆರ್ ಶೆಟ್ಟಿ (ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ)

ಸ್ನೇಹಾ ಎಸ್.ಎಸ್. ( ಅಥ್ಲೆಟಿಕ್ಸ್ 4×100 ಮಿಶ್ರ ರಿಲೇ ಕಂಚು)

ಅಧಿತಿ ಅಶೋಕ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ)

ಪ್ರಣವಿ ಎಸ್. ಅರಸ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ ಹಾಗೂ ವೈಯಕ್ತಿಕ ಚಿನ್ನ)

ಮೋಹಿತ್ ಹೆಚ್.ಎಸ್. (ಹಾಕಿ ಪುರುಷರ ತಂಡ, ಚಿನ್ನ)

ಏಷ್ಯನ್ ಗೇಮ್ಸ್ 2026 ರಲ್ಲಿ ಭಾಗವಹಿಸಿ ತಲಾ ₹5.00 ಲಕ್ಷ ರೂ. ಪ್ರೋತ್ಸಾಹಧನ ಪಡೆದ 20 ಕ್ರೀಡಾಪಟುಗಳು

ಯಶಸ್ ಪಾಲಾಕ್ಷ – ಅಥ್ಲೆಟಿಕ್ಸ್

ಸುಪ್ರಿಯಾ ಸಿಂಡಿಗೆರೆ ಬಸವರಾಜು – ಅಥ್ಲೆಟಿಕ್ಸ್

ಉನ್ನತಿ ಅಯ್ಯಪ್ಪ – ಅಥ್ಲೆಟಿಕ್ಸ್

ಎಂ.ಆರ್. ಪೂವಮ್ಮ – ಅಥ್ಲೆಟಿಕ್ಸ್

ಸ್ನೇಹಾ ಎಸ್.ಎಸ್. – ಅಥ್ಲೆಟಿಕ್ಸ್

ಆಯುಷ್ ಶೆಟ್ಟಿ – ಬ್ಯಾಡ್ಮಿಂಟನ್

ಶ್ರೇಯಾಂಕ ಆರ್. ಪಾಟೀಲ್ – ಕ್ರಿಕೆಟ್ T20

ಕೀರ್ತಿ ರಂಗಸ್ವಾಮಿ – ಸೈಕ್ಲಿಂಗ್ ಟ್ರ್ಯಾಕ್

ಫವಾದ್ ಮಿರ್ಜಾ- ಈಕ್ವೇಸ್ಟ್ರೀಯನ್

ಅಧಿತಿ ಅಶೋಕ್ – ಗಾಲ್ಫ್

ಪ್ರಣವಿ ಎಸ್. ಅರಸ್ – ಗಾಲ್ಫ್

ಮೋಹಿತ್ ಹೆಚ್.ಎಸ್. – ಹಾಕಿ

ತಿಲೋತ್ತಮಾ ಸೇನ್ – ಶೂಟಿಂಗ್

ಆಕಾಶ್ ಮಣಿ – ಈಜು

ಶ್ರೀ ಹರಿ ನಟರಾಜ್ – ಈಜು

ದಕ್ಷಣ್ ಎಸ್. – ಈಜು

ಅನೀಶ್ ಗೌಡ – ಈಜು

ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್

ಸಿಂಧುಶ್ರೀ – ಅಥ್ಲೆಟಿಕ್ಸ್

ದೀಪು ಮಲ್ಲೇಶ್ – ಸ್ಪೋರ್ಟ್ಸ್ ಕ್ಲೈಂಬಿಂಗ್

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ

ಬೆಂಗಳೂರು,ಅಕ್ಟೋಬರ್,6,2026 (www.justkannada.in): ಕೆಪಿಎಸ್​​ಸಿ ಪಶುವೈದ್ಯ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿದ್ದು,ಈ...

ಕನ್ನಡ ಕೈಬರಹ ಉಳಿಸಲು ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಸಲಹೆ

ಮೈಸೂರು,ಅಕ್ಟೋಬರ್,6,2026 (www.justkannada.in):  ಇಂದಿನ ಮಕ್ಕಳು ಕನ್ನಡವನ್ನು ಇಂಗ್ಲಿಷಿನಲ್ಲಿ ಬರೆಯುತ್ತಿದ್ದಾರೆ. ಇದಕ್ಕಾಗಿ ಕನ್ನಡ...

ಮೈಸೂರು ದಸರಾ ಹಿನ್ನೆಲೆ: ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರಕ್ಕೆ ನಿರ್ಧಾರ

ಮೈಸೂರು,ಅಕ್ಟೋಬರ್,6,2026 (www.justkannada.in): ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು...

ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,6,2026 (www.justkannada.in): “ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ...