ಚಾಮರಾಜನಗರ,ಏ,19,2025 (www.justkannada.in): ಏಪ್ರಿಲ್ 24 ರಂದು ಚಾಮರಾಜನಗರ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಇದಕ್ಕಾಗಿ ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಸಕಲ ತಯಾರಿ ನಡೆಸಲಾಗುತ್ತಿದೆ.
ಇಂದು ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಪೂರ್ವ ತಯಾರಿ ಪರಿಶೀಲಿಸಿದರು. ಬೆಟ್ಟದ ವಿವಿಧ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಟ್ಟದಲ್ಲಿ ಹೆಲಿಪ್ಯಾಡ್, ಪಾರ್ಕಿಂಗ್, ವಾಸ್ತವ್ಯಕ್ಕಾಗಿ ವಸತಿಗೃಹಗಳ ನಿಯೋಜನೆ. ಸಕಲ ವ್ಯವಸ್ಥೆಗಳು ಯಾವುದೇ ತೊಂದರೆ ಆಗದಂತೆ ಬರುವಂತ ಅತಿಥಿಗಳಿಗೆ ಒದಗಿಸಲು ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು.
ಎರಡು ದಶಕಗಳ ಬಳಿಕ ಚಾಮರಾಜನಗರಲ್ಲಿ ಸಂಪುಟ ಸಭೆ ನಡೆಯುತ್ತಿದ್ದು, ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಮೂರ್ನಾಲ್ಕು ಬಾರಿ ದಿನಾಂಕ ನಿಗದಿಯಾಗಿ ರದ್ದಾಗಿತ್ತು. ಇದೀಗ ಇದೇ ತಿಂಗಳ 24 ಕ್ಕೆ ಮಾದಪ್ಪನ ಸನ್ನಿಧಿಯಲ್ಲಿ ಈ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಗಡಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.
Key words: Cabinet meeting, Male Mahadeshwara Hill, April 24, preparations
The post ಏ.24 ರಂದು ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ: ಸಕಲ ಸಿದ್ಧತೆ ಪರಿಶೀಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.