ಬೆಂಗಳೂರು,ಏಪ್ರಿಲ್,29,2025 (www.justkannada.in): ಕಾಂಗ್ರೆಸ್ ಸಮಾವೇಶದ ವೇಳೆ ಬಿಜೆಪಿ ಕಪ್ಪು ಪಟ್ಟಿ ಪ್ರದರ್ಶಿಸಿದಕ್ಕೆ ಎಎಸ್ ಪಿ ಅವರ ಮೇಲೆ ಗರಂ ಆಗಿ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ ಘಟನೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಶಾಂತಿ ಶಾಂತಿ ಎನ್ನುತ್ತಾರೆ ಐಪಿಎಸ್ ಅಧಿಕಾರಿಗೆ ಹೊಡೆಯೋಕೆ ಹೋಗೋದು ಶಾಂತಿನಾ..? ಪೊಲೀಸ್ ಅಧಿಕಾರಿ ಏನ್ ನಿಮ್ಮ ಮನೆ ಕಸ ಹೊಡೆಯೋರಾ? ಪರೀಕ್ಷೆ ಬರೆದು ಐಪಿಎಸ್ ಪಾಸ್ ಮಾಡಿ ಅವರು ಬಂದಿದ್ದಾರೆ. ಸಿದ್ದರಾಮಯ್ಯ ಏನು ಒದ್ದಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಪಾಕಿಸ್ತಾನದಲ್ಲೂ ಫೇಮಸ್ ಆಗಿದ್ದಾರೆ. ಸಿದ್ದರಾಮಯ್ಯ ಕಡಿಮೆ ಮತಗಳಿಂದ ಗೆದ್ದಿದ್ದಾರೆ ಪಾಕ್ ನಲ್ಲಿ ನಿಂತರೆ ಅವರು 1 ಲಕ್ಷ ಮತಗಳಿಂದ ಗೆಲ್ಲುತ್ತಾರೆ . ಪಾಕ್ ಪರ ಹೇಳಿಕೆಯನ್ನ ಡಿಕೆ ಶಿವಕುಮಾರ್ ಅವರೂ ಬೆಂಬಲಿಸಿಲ್ಲ. ಹೇಳಿಕೆ ರಿಯಾಗಿದ್ರೆ ಡಿಕೆ ಶಿವಕುಮಾರ್ ಬೆಂಬಲಿಸುತ್ತಿದ್ದರು ಎಂದು ಆರ್.ಅಶೋಕ್ ಟೀಕಿಸಿದರು.
Key words: peaceful, beat, IPS officer, CM Siddaramaiah, R. Ashok
The post ಐಪಿಎಸ್ ಅಧಿಕಾರಿಗೆ ಹೊಡೆಯೋಕೆ ಹೋಗೋದು ಶಾಂತಿನಾ? ಅವರನು ನಿಮ್ಮ ಮನೆ ಕಸ ಹೊಡೆಯೋರಾ? ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.