ಬೆಂಗಳೂರು,ಜೂನ್,23,2025 (www.justkannada.in): ನನಗೆ ಐಶ್ವರ್ಯಗೌಡ ಜೊತೆ ಯಾವುದೇ ವ್ಯವಹಾರ ಇಲ್ಲ. ಇಡಿ ತನಿಖೆಗೆ ನಾನು ಸಹಕಾರ ನೀಡುತ್ತೇನೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.
ಇಂದು ಇಡಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಡಿ.ಕೆ ಸುರೇಶ್, ಆ ಮಹಿಳೆ ನನ್ನ ಸಹೋದರಿ ಅಂತಾ ಹೇಳಿದ್ದಾರೆ. ನನ್ನ ಕ್ಷೇತ್ರದವರು ಹಲವು ಭಾರಿ ನನ್ನನ್ನ ಭೇಟಿಯಾಗಿದ್ದಾರೆ. ನಾನು ಅವರ 2 ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೆ. ಆದನ್ನು ಹೊರತುಪಡಿಸಿ ಬೇರೆನು ಇಲ್ಲ ಎಂದರು.
ಇನ್ನು ಇಡಿ ತನಿಖೆ ವ್ಯಾಪ್ತಿ ಹೊರತುಪಡಿಸಿ ಕೇಸ್ ದಾಖಲಿಸಿಕೊಳ್ಳುತ್ತಿದೆ. ಇಡಿ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಡಿಕೆ ಸುರೇಶ್ ಕಿಡಿಕಾರಿದರು.
Key words: No business, Aishwarya Gowda, ED investigation, D.K. Suresh
..
The post ಐಶ್ವರ್ಯಗೌಡ ಜೊತೆ ಯಾವುದೇ ವ್ಯವಹಾರ ಇಲ್ಲ: ಇಡಿ ತನಿಖೆಗೆ ಸಹಕಾರ- ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.