ಬೆಳಗಾವಿ,ಮೇ,31,2025 (www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಪರೀಕ್ಷೆ ಮುಗಿದ ಒಂದೇ ತಾಸಿನಲ್ಲಿ ಫಲಿತಾಂಶವನ್ನ ಪ್ರಕಟಿಸಿದೆ.
ಹೌದು, ಅಂತಿಮ ಸೆಮಿಸ್ಟರ್ ಬಿಇ, ಬಿ.ಟೆಕ್, ಬಿ.ಪ್ಲಾನ್, ಬಿ.ಆರ್ಕ್, ಬಿ.ಎಸ್.ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಒಂದೇ ಗಂಟೆಯೊಳಗೆ ಪ್ರಕಟಿಸಿದೆ. ಮೇ 30ರಂದು ಸಂಜೆ 5.30ಕ್ಕೆ ಪರೀಕ್ಷೆ ಮುಗಿದಿದ್ದು, 6.30ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ.
ಈ ಹಿಂದೆ ವಿಟಿಯು ಮೂರು ತಾಸಿನ ಒಳಗೇ ಫಲಿತಾಂಶ ಪ್ರಕಟಿಸುವ ಮೂಲಕ ಸಾಧನೆ ತೋರಿತ್ತು. ಈಗ ಅದನ್ನು ಒಂದು ತಾಸಿನೊಳಗೇ ಸಾಧ್ಯಗೊಳಿಸಿದ್ದು, ಶುಕ್ರವಾರ ಅಂತಿಮ ಸೆಮಿಸ್ಟರ್ ನ 50,321 ವಿದ್ಯಾರ್ಥಿಗಳು ವಾಟ್ಸ್ ಆ್ಯಪ್‌ನಲ್ಲಿ ಫಲಿತಾಂಶ ಪಡೆದಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘2019ರಲ್ಲಿ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಎರಡು ದಿನಗಳ ಒಳಗಾಗಿ ನೀಡಲಾಗಿತ್ತು. 2020ರಿಂದ ಮೂರು ತಾಸಿನೊಳಗೆ ಫಲಿತಾಂಶ ನೀಡಲಾಗಿತ್ತು. ಈ ಸಮಯವನ್ನು ಮತ್ತೊಮ್ಮೆ ಕಡಿಮೆ ಮಾಡಲಾಗಿದೆ.
ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಯೋಜನ ವಾಗುತ್ತದೆ. ಮೇ 31ರಿಂದಲೇ ವಿದ್ಯಾರ್ಥಿಗಳು ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳಿಗೆ (ಪಿಡಿಸಿ) ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದೂ ಪ್ರೊ.ಎಸ್. ವಿದ್ಯಾಶಂಕರ್ ಅವರು ತಿಳಿಸಿದ್ದಾರೆ.
Key words: VTU, declared, results, within, an hour
The post ಒಂದೇ ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದ ವಿಟಿಯು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.