ಬೆಂಗಳೂರು,ಮೇ,29,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿತ್ತು ಎಂಬ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ವಿರುದ್ದ ಹಿರಿಯ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸುಮಲತಾ ಅಂಬರೀಶ್, ಕಮಲ್ ಹಾಸನ್ ಕನ್ನಡಕ್ಕೆ ಅಪಮಾನ ಮಾಡಿದ್ದನ್ನ ಗಮನಿಸಿದ್ದೇನೆ. ಕನ್ನಡಕ್ಕೆ ಈ ರೀತಿ ಅಪಮಾನ ಮಾಡಿದ್ದು ಸರಿಯಲ್ಲ ಹೇಳಕೆಗಳನ್ನ ಕೊಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಕನ್ನಡಕ್ಕೆ ಅಪಮಾನವಾದರೆ ಯಾರು ಕೂಡ ಸಹಿಸಲ್ಲ. ಕ್ಷಮೆ ಕೇಳುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿದೆ ಎಂದು ಹೇಳಲು ಆಗಲ್ಲ. ಹಿರಿಯ ನಟ ಎಂದು ಗೌರವವಿದೆ ಯಾರು ಪಂಡಿತರಲ್ಲ. ಯಾರೊಬ್ಬರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಆಗಲ್ಲ. ಕನ್ನಡದ ಭಾಷೆಗೆ ಅದರದ್ದೇ ಆದ ಘನತೆ ಇದೆ ಎಂದು ಸುಮಲತಾ ಅಂಬರೀಶ್ ಕಿಡಿಕಾರಿದರು.
Key words: insults, Kannada, Kamal Haasan, Sumalatha Ambareesh
The post ಕನ್ನಡಕ್ಕೆ ಅಪಮಾನವಾದರೆ ಯಾರು ಕೂಡ ಸಹಿಸಲ್ಲ: ಕಮಲ್ ಹಾಸನ್ ವಿರುದ್ದ ಸುಮಲತಾ ಅಂಬರೀಶ್ ಅಸಮಾಧಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.