ಬೆಂಗಳೂರು. ಜೂನ್.೦೨,೨೦೨೫ : ಬೆಳ್ಳಂದೂರಿನಲ್ಲಿ ಆಟೋರಿಕ್ಷಾ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ 28 ವರ್ಷದ ಮಹಿಳೆ ಬಂಧನ. ಘಟನೆ ನಡೆದ ಮರು ದಿನ ಅಂದ್ರೆ, ಭಾನುವಾರ ಆರೋಪಿ ಮಹಿಳೆಯ ಬಂಧನ.
ಗ್ರೀನ್ ಗ್ಲೆನ್ ಲೇಔಟ್‌ನಲ್ಲಿ ವಾಸಿಸುವ ಸಾಫ್ಟ್‌ವೇರ್ ಎಂಜಿನಿಯರ್ ಪಂಖುರಿ ಮಿಶ್ರಾ ಎಂಬಾಕೆಯೇ ಬಂಧಿತ ಆರೋಪಿ.
ಪೊಲೀಸರ ಪ್ರಕಾರ, ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪಂಖುರಿ ಮತ್ತು ಅವರ ಪತಿ ಆಟೋ ಚಾಲಕ ಲೋಕೇಶ್ (33) ಜೊತೆ ಜಗಳವಾಡಿದರು. ಆಟೋ ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿಕೊಂಡಿದ್ದು, ಜಗಳಕ್ಕೆ ಕಾರಣವಾಯಿತು.
ಲೋಕೇಶ್ ತಮ್ಮ ಫೋನ್‌ನಲ್ಲಿ ವಾಗ್ವಾದವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ, ಪಂಖುರಿ ಅವರ ಚಪ್ಪಲಿಯಿಂದ ಹೊಡೆದು ಅವರ ಮೇಲೆ ಹಲ್ಲೆ ನಡೆಸಿದಳು. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿತು.
ಆಗ ತಾನು ಗರ್ಭಿಣಿ ಎಂಬುದಾಗಿ ಹೇಳಿಕೊಂಡ ಮಹಿಳೆ, ಪೊಲೀಸರಿಂದ ಅನುಕಂಪ ಗಿಟ್ಟಿಸಲು ಯತ್ನಿಸಿದಳು ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ವೈದ್ಯಕೀಯ ತಪಾಸಣೆಗೆ ಹೋಗುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.
ಲೋಕೇಶ್ ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶ ಮತ್ತು ಕನ್ನಡ ಪರ ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಯಿತು. ಸ್ಥಳೀಯ ಚಾಲಕನ ಮೇಲೆ ಹೊರಗಿನ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳಲು ಕಾರಣವಾಯಿತು.
ಪೊಲೀಸರು ಆರೋಪಿ ಮಹಿಳೆಯ ಹೇಳಿಕೆ ದಾಖಲಿಸಿದ ನಂತರ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
key words: Arrest, the accused lady, assaulted a Kannada auto driver, Bellandur, Bengaluru, Bangalore
SUMMARY:
Arrest of the accused lady, who assaulted a Kannada auto driver, later released.
A 28-year-old woman who attacked an auto-rickshaw driver with a slipper in Bellandur has been arrested. The arrest of the accused woman took place the day after the incident, that is, on Sunday.
The post ಕನ್ನಡಿಗ ಆಟೋ ಚಾಲಕನ ಮೇಲೆ ಹಲ್ಲೆ ನಡಿಸಿದ ಹಿಂದಿವಾಲಿ ಬಂಧನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.