ಮೈಸೂರು,ಮೇ,29,2025 (www.justkannada.in): ಕನ್ನಡ ತಮಿಳಿನಿಂದ ಹುಟ್ಟಿರುವ ಭಾಷೆ ಎಂದು ಹೇಳಿಕೆ ನೀಡಿರುವ ಚಿತ್ರನಟ ಕಮಲ ಹಾಸನ್ ವಿರುದ್ಧ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ದೇವರಾಜ ಅರಸು ರಸ್ತೆಯಲ್ಲಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕಮಲಹಾಸನ್ ಅವರು ಈ ಕೂಡಲೇ ಕನ್ನಡ ಭಾಷೆಗೆ ಅವಮಾನ ಮಾಡಿದ್ದಕ್ಕಾಗಿ ಕ್ಷಮೆಯೋಚಿಸಬೇಕು ಎಂದು ಪ್ರತಿಭಟನೆಕಾರರು ನಟ ಕಮಲ್ ಹಾಸನ್ ಗೆ ಆಗ್ರಹಿಸಿದರು. ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ ಕಮಲ್ ಹಾಸನ್ ಅನೇಕ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಆದರೆ, ಅವರ ಹೇಳಿಕೆಯಿಂದ ಕನ್ನಡಿಗರಿಗೆ ಅವಮಾನಿಸದಂತಾಗಿದೆ. ಅಲ್ಲದೇ, ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.
ಕಮಲ್ ಹಾಸನ್ ಅವರು ರಾಜ್ಯಕ್ಕೆ ಬಂದು ಕನ್ನಡ ತಮಿಳಿನಿಂದ ಬಂದಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ರೊಚ್ಚಿಗೆಳುವಂತೆ ಮಾಡಿದ್ದಾರೆ. ನಾಡು ನುಡಿಗೆ ಹೆಸರಾದ ಕರ್ನಾಟಕ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ, ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವತಂತ್ರ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ ಭಾಷೆಯಾಗಿದೆ.
ಕೋಟ್ಯಂತರ ಕರುನಾಡಿಗರ ಜೀವನಾಡಿಯಾಗಿರುವ ಹೆಮ್ಮೆಯ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ ಅವರು ಅವಮಾನಿಸಿದ್ದಾರೆ. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಶೀಘ್ರವೇ ನಟ ಕಮಲಹಾಸನ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಬೇಕು. ಇಲ್ಲವಾದರೆ ಅವರ ಚಿತ್ರಗಳನ್ನು ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಮಂಜುನಾಥ್, ರವಿಕುಮಾರ್, ಸಂಗಮ್, ಉಮೇಶ್, ರವಿಚಂದ್ರ, ಪ್ರಶಾಂತ್, ನಿತಿನ್, ಹರೀಶ್ ಗೌಡ, ರವಿ, ಶ್ರೀನಿವಾಸ್, ಕಣ್ಣಣ್ಣ, ಶ್ರೀನಿವಾಸ್ ಶೆಟ್ಟಿ, ಕುಮಾರ್, ಬಾಬು, ಚಂದ್ರು, ಆನಂದ,ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Key words: Kannada language, Actor, Kamal Haasan, Mysore, protests,
The post ಕನ್ನಡ ಭಾಷೆ ಅವಮಾನ: ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ, ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.