ಬೆಂಗಳೂರು,ಏಪ್ರಿಲ್,10,2025 (www.justkannada.in): ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್, ಮಧ್ಯವರ್ತಿಗಳು ಹೆಚ್ಚಾಗಿದೆ ಎಂಬ ಗುತ್ತಿಗೆದಾರರ ಸಂಘದ ಆರೋಪಕ್ಕೆ ಸಚಿವ ಎನ್.ಎಸ್ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎನ್.ಎನ್ ಬೋಸರಾಜು, ಕಮಿಷನ್ ಆರೋಪ ಸಾಬೀತಾದರೇ ರಾಜೀನಾಮೆ ನೀಡುತ್ತೇನೆ. ಗುತ್ತಿಗೆದಾರರ ಸಂಘ ಸ್ಪಷ್ಟನೆ ಕೇಳಿ ಆ ಮೇಲೆ ಆರೋಪ ಮಾಡಲಿ. ಸುಮ್ಮನೆ ಆರೋಪ ಮಾಡಬಾರದು ಎಂದರು.
ನನ್ನ ಇಲಾಖೆಯಲ್ಲಿ ಶೇ 101 ರಷ್ಟು ಪಾರದರ್ಶಕತ ಇದೆ. ಬೇರೆಯವರ ಇಲಾಖೆ ಬಗ್ಗೆ ಗೊತ್ತಿಲ್ಲ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ. ಅಧಿಕಾರಿಗಳು ತಪ್ಪು ಮಾಡಿದಾಗ ನಾನು ಸಹಿಸಲ್ಲ. ಗುತ್ತಿಗೆದಾರರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಗುತ್ತಿಗೆದಾರರು ಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.
Key words: Minister, N.S. Bosaraju, commission, allegations
The post ಕಮಿಷನ್ ಆರೋಪ ಸಾಬೀತಾದರೇ ರಾಜೀನಾಮೆ- ಸಚಿವ ಎನ್.ಎಸ್ ಬೋಸರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.