ಬೆಂಗಳೂರು,ಮೇ,30,2025 (www.justkannada.in): ಕರಾವಳಿ ಭಾಗದಲ್ಲಿ ಆಗುತ್ತಿರುವ ಸರಣಿ ಕೊಲೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕರಾವಳಿ ಭಾಗದ ಘಟನೆ ಗಂಭೀರವಾಗಿ ಪರಿಗಣಿಸಿದ್ದೇವೆ. ಅಲ್ಲಿನ ಜನ ಶಾಂತಿಯಿಂದ ಇರಬೇಕು ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಆರ್ಥಿಕ ಶೈಕ್ಷಣಿಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ. ಮಂಗಳೂರು, ದಕ್ಷಿಣ ಕನ್ನಡದ ಜನ ಶಾಂತಿಯಿಂದ ಇರಬೇಕು. ಕರಾವಳಿ ಭಾಗದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ರಚನೆಗೆ ಸ್ವಲ್ಪ ಸಮಯ ಬೇಕಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದೇನೆ. ಎಲ್ಲಿ ಯಾರಿಗೆ ಯಾವಾಗ ಅಧಿಕಾರ ಕೊಡಬೇಕು ಅಂತಾ ಕೆಲವೊಂದು ವಿಚಾರದಲ್ಲಿ ಕಠಿಣವಾದ ಸೂಚನೆ ಕೊಡಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಬದಲಾವಣೆಗೆ ಮನವಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ದಿನೇಶ್ ಗುಂಡೂರಾವ್ ಗೆ ಮೊದಲಿನಿಂದಲೂ ಬೇಡ ಅಂತಿದ್ದರು ದ.ಕನ್ನಡ ಜಿಲ್ಲೆ ಬಹಳ ದೂರ ಆಗುತ್ತೆ ಹೀಗಾಗಿ ಬೇಡ. ಅಂತಿದ್ದರು ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು.
Key words: incident, Mangalore, seriously, peaceful, Home Minister, Dr. G. Parameshwar
The post ಕರಾವಳಿ ಭಾಗದ ಘಟನೆ ಗಂಭೀರವಾಗಿ ಪರಿಗಣನೆ: ಅಲ್ಲಿನ ಜನ ಶಾಂತಿಯಿಂದ ಇರಬೇಕು- ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.