8
September, 2026

A News 365Times Venture

8
Tuesday
September, 2026

A News 365Times Venture

ಕಸ್ತೂರಿ ರಂಗನ್ ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ- ಶಾಸಕ ಬೇಳೂರು ಗೋಪಾಲಕೃಷ್ಣ

Date:

ಶಿವಮೊಗ್ಗ,ಸೆಪ್ಟಂಬರ್,5,2026 (www.justkannada.in): ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಿಸಬೇಕು. ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಇಂದು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಸ್ತೂರಿ ರಂಗನ್ ವರದಿ ಜಾರಿಯಾದರೇ ಮಲೆನಾಡಿನ ರೈತರು ಜನಸಾಮಾನ್ಯರಿಗೆ ಮತ್ತಷ್ಟು ಸಂಕಷ್ಟ ೆದುರಾಗುತ್ತದೆ. ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ರದ್ದತಿಗೆ ನಿರಂತರ ಹೋರಾಟ ಮಾಡಲಾಗುತ್ತದೆ.  ಶರಾವತಿ ಸಂತ್ರಸ್ತರು ಸೇರಿ ರೈತರಿಗೆ ಮತ್ತೊಂದು ಹೊಡೆತ  ಬೀಳುವ ಆತಂಕವಿದೆ.  ಗ್ರಾಮಗಳಲ್ಲಿನ ಶಾಲೆ, ಮನೆ ಆಸ್ಪತ್ರೆ, ದೇಗುಲ ಮೇಲೂ ವರದಿ ಪರಿಣಾಮ ಬೀರುವ ಭೀತಿ ಇದೆ. ರೈತರ ಪರವಾಗಿ ಬಿಜೆಪಿ ಸಂಸದರು ಧ್ವನಿ ಎತ್ತಿಲ್ಲ. 7 ಕರಡು ಅಧಿಸೂಚನೆ ಬಂದರೂ ಸಂಸದರು ಚರ್ಚಿಸಿಲ್ಲ ನನ್ನ ಬಳಿ ದಾಖಲೆಗಳಿವೆ ಎಂದರು.

ಸೆ 21, 22, 23 ರಂದು ಮೂರು ದಿನ ವಿಶೇಷ ಅಧಿವೇಶನ ಕರೆದಿದ್ದಾರೆ. ಈ ವೇಳೆ ರಂಗನ್ ವರದಿ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದಾರೆ.  ಅಧಿವೇಶನದಲ್ಲಿ ಕರಡು ಅಧಿಸೂಚನೆ ರದ್ದುಪಡಿಸುವ ನಿರ್ಣಯ ಕೈಗೊಳ್ಳಲು  ಸಿಂ ಡಿಕೆ ಶಿವಕುಮಾರ್ ಗೆ ಮನವಿ ಮಾಡಿದ್ದೇವೆ.  ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ರೈತರ ವಿಚಾರದಲ್ಲಿ ರಾಜಿ ಇಲ್ಲ ಎಂದು ತಿಳಿಸಿದರು.

Key words: Cancel, Kasturi Rangan report, MLA, Belur Gopalakrishna

 

The post ಕಸ್ತೂರಿ ರಂಗನ್ ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ- ಶಾಸಕ ಬೇಳೂರು ಗೋಪಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಗೆ ಚಾಲನೆ

ಮೈಸೂರು,ಸೆಪ್ಟಂಬರ್.7,2026 (www.justkannada.in):  ನಗರದ ಬೋಗಾದಿ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಇಂಡಿಯನ್ ಡೆಂಟಲ್...

ಕಸ್ತೂರಿ ರಂಗನ್ ವರದಿ: ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಸೆಪ್ಟಂಬರ್,7,2026 (www.justkannada.in): ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ರಾಜ್ಯದ...

ಡಿಕೆಶಿ ಜಾಸ್ತಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ ‘ಕೈ’ ಹೈಕಮಾಂಡ್ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದಿದೆ- ಸಿ.ಟಿ ರವಿ

ಕೊಪ್ಪಳ,ಸೆಪ್ಟಂಬರ್,7,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ಜಾಸ್ತಿ ಸೂಟ್ ಕೇಸ್ ಕೊಟ್ಟಿದ್ದಕ್ಕೆ...

ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ, ನಾವೆಲ್ಲಾ ಸರಿಯಾದ ಹಾದಿಯಲ್ಲಿದ್ದೇವೆ- ಮಾಜಿ ಸಚಿವ HC ಮಹದೇವಪ್ಪ

ಬೆಂಗಳೂರು,ಸೆಪ್ಟಂಬರ್,7,2026 (www.justkannada.in): ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ, ನಾವೆಲ್ಲಾ ಸರಿಯಾದ ಹಾದಿಯಲ್ಲಿದ್ದೇವೆ ಎಂದು...