ಬೆಂಗಳೂರು,ಸೆಪ್ಟಂಬರ್,7,2026 (www.justkannada.in): ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ, ನಾವೆಲ್ಲಾ ಸರಿಯಾದ ಹಾದಿಯಲ್ಲಿದ್ದೇವೆ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಅಹಿಂದ ಒಬ್ಬರಿಂದಲೇ ಆಗಿಲ್ಲ. ಫಸ್ಟ್ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಲಾಗಿತ್ತು. ನಾನೊಬ್ಬನೇ ರೂಪಿಸಿದ್ದೇ ಬರೀ ಭಾಷಣ ಮಾಡಿ ಹೋಗೋದಲ್ಲ. ಅಹಿಂದಾ ನಾಯಕ ಯಾರು? ಭಾಷಣದಿಂದ ಮಾಡೋಕೆ ಸಾಧ್ಯವೇ? ಸಿದ್ದರಾಮಯ್ಯ ನನ್ನ ಎಲ್ಡರ್ ಬ್ರದರ್. ಇಷ್ಟು ವರ್ಷ ಹಾಡಿಹೊಗಳಿ ಈಗ ಬೇರೆ ಮಾತನಾಡಿದರೆ ಆಗುತ್ತಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ ಒಗ್ಗಟ್ಟಾಗಿದ್ದೇವೆ. ನಾವೆಲ್ಲ ಸರಿಯಾದ ಹಾದಿಯಲ್ಲಿದ್ದೇವೆ ಎಂದು ಮಹದೇವಪ್ಪ ತಿಳಿಸಿದರು.
Key words: unity, Congress, Former Minister, HC Mahadevappa
The post ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ, ನಾವೆಲ್ಲಾ ಸರಿಯಾದ ಹಾದಿಯಲ್ಲಿದ್ದೇವೆ- ಮಾಜಿ ಸಚಿವ HC ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




