ಬೆಂಗಳೂರು, ಮೇ, 5,2025 (www.justkannada.in): ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಎಸ್ಸಿ ಒಳ ಮೀಸಲಾತಿ ಸಮೀಕ್ಷೆ ಇದೊಂದು ಚಾರಿತ್ರಿಕವಾದದ್ದು. ಪರಿಶಿಷ್ಟ ಜಾತಿ ಅನ್ನೋದು ಜಾತಿ ಅಲ್ಲ, ಅದೊಂದು ಗುಂಪು. ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶಗಳ ಸಂಗ್ರಹಕ್ಕಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಮೀಕ್ಷೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳ ಜನಸಂಖ್ಯೆ ತಿಳಿಯಲು ಒಳಮೀಸಲಾತಿ ಜಾರಿಗೆ ಗಣತಿ ಮಾಡುತ್ತಿದ್ದೇವೆ. ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ತಿಳಿಸಿದರು.
ಇದು ಎಸ್.ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ ಆಗಲ್ಲ. ಕಾಂತರಾಜು ವರದಿಯಲ್ಲಿ, ನ್ಯಾಷನಲ್ ಸಮೀಕ್ಷೆಯಲ್ಲಿ ಅಂಕಿ-ಅಂಶ ಇಲ್ಲ. ಹೀಗಾಗಿ ಯಾರು ಕೂಡ ಅನುಮಾನ ಪಡುವ ಹಾಗಿಲ್ಲ. ಯಾರು, ಎಷ್ಟು ಜನ ಇದ್ದಾರೆ ಅಂತಾ ಯಾರಿಗೂ ಸಹ ಗೊತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
Key words: SC, internal reservation, survey, Minister, H.C. Mahadevappa
The post ಕಾಂತರಾಜು ವರದಿಗೂ, ಎಸ್.ಸಿ ಒಳಮೀಸಲಾತಿ ಸಮೀಕ್ಷೆಗೂ ಸಂಬಂಧ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.