ಬೆಂಗಳೂರು,ಮಾರ್ಚ್,10,2025 (www.justkannada.in): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳ ಪ್ರವಾಸದ ಹೆಸರಿನಲ್ಲಿ 100ಕ್ಕೂ ಹೆಚ್ಚು ಜನರಿಗೆ ಸುಮಾರು 70 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನ ಬೆಂಗಳೂರಿನ ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರಾವ್ ಬಂಧಿತ ಆರೋಪಿ. ಬಂಧಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರಿಗೆ ಆರೋಪಿ ರಾಘವೇಂದ್ರರಾವ್ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ ಬುಕ್ ನಲ್ಲಿ ಜಾಹೀರಾತು ಮೂಲಕ ಅಮಾಯಕರನ್ನು ಸಂಪರ್ಕ ಮಾಡುತ್ತಿದ್ದ ರಾಘವೇಂದ್ರ ರಾವ್, ಪಾಂಚಜನ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿ ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್ ರಾಜ್ ಪ್ರವಾಸದ ಪ್ಯಾಕೇಜ್ ಬಗ್ಗೆ ತಿಳಿಸುತ್ತಿದ್ದ. ಏಳು ದಿನಗಳ ಪ್ಯಾಕೇಜ್ ಗೆ ತಲಾ 49 ಸಾವಿರ ರೂಪಾಯಿಯನ್ನು ರಾಘವೇಂದ್ರ ರಾವ್ ಪಡೆಯುತ್ತಿದ್ದ ಎನ್ನಲಾಗಿದೆ.
ಜಾತಿಯ ಹೆಸರಲ್ಲಿ ಅಮಾಯಕರನ್ನು ಸೆಳೆದು ರಾಘವೇಂದ್ರ ಪ್ರವಾಸದ ಹೆಸರಿನಲ್ಲಿ ಸುಮಾರು 70ಲಕ್ಷ ವಂಚಿಸಿದ್ದಾನೆ .ಪ್ರಯಾಣಿಕರಲ್ಲಿ ಹಣ ಪಡೆದು ಎರಡು ರೀತಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಕೆಲವರಿಗೆ ಟಿಕೆಟ್ ಬುಕ್ ಮಾಡಿ ನಂತರ ರದ್ದು ಮಾಡಿ ಹಣ ವಾಪಸ್ ತನ್ನ ಅಕೌಂಟಿಗೆ ಹಾಕಿಕೊಳ್ಳುತ್ತಿದ್ದ. ಅಲ್ಲದೆ ಕೆಲವರು ಪ್ರಯಾಗ್ ರಾಜ್ ಪ್ರವಾಸದ ನಂತರ ರಿಟರ್ನ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾನೆ. ಟಿಕೆಟ್ ಅವರದ್ದು ಮಾಡಿ ಹಣವನ್ನು ತನ್ನ ಖಾತೆಗೆ ವಾಪಸ್ ಹಾಕಿಸಿಕೊಳ್ಳುತ್ತಿದ್ದ. ಟಿಕೆಟ್ ಕ್ಯಾನ್ಸಲ್ ಬಳಿಕ ಆರೋಪಿ ರಾಘವೇಂದ್ರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ.
ಈ ಬಗ್ಗೆ 20 ಜನರು ಗೋವಿಂದರಾಜನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಘವೇಂದ್ರನನ್ನು ಬಂಧಿಸಿದ್ದಾರೆ . ಅಮಾಯಕರ ಹಣದಲ್ಲಿ ರಾಘವೇಂದ್ರ ಬೆಟ್ಟಿಂಗ್ ಗಾಡಿ ಎಲ್ಲ ಹಣ ಸೋತಿದ್ದಾನೆ ಎಂಬ ವಿಚಾರ ಬಯಲಾಗಿದೆ.
Key words: KumbhMela trip, Accused, 100 people, cheated, arrest
The post ಕುಂಭಮೇಳ ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಗೆ , 70ಲಕ್ಷ ರೂ. ವಂಚನೆ: ಆರೋಪಿ ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.