28
April, 2026

A News 365Times Venture

28
Tuesday
April, 2026

A News 365Times Venture

ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ- ಸಚಿವ ಶಿವರಾಜ್ ತಂಗಡಗಿ ಸೂಚನೆ

Date:

ಕೊಪ್ಪಳ,ಏಪ್ರಿಲ್,28,2026 (www.justkannada.in):  ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೂಚನೆ ನೀಡಿದರು.

ಕೊಪ್ಪಳ ಜಿಲ್ಲೆ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಸಚಿವ ಶಿವರಾಜ್ ತಂಗಡಗಿ ಸಭೆ ನಡೆಸಿ ಚರ್ಚಿಸಿದರು.  ಸಂಕನಾಳ ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಅಧಿಕಾರಿಗಳಿಗೆ  ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು.  ಅಮೃತ 2 ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶಿವರಾಜ್ ತಂಗಡಗಿ ನನ್ನ ಕ್ಷೇತ್ರದಲ್ಲಿ ಮಾತ್ರ ಕೆಲಸ ಬಹಳ ವಿಳಂಬ ಆಗುತ್ತಿದೆ ಕೇವಲ 27 ಪರ್ಸೆಂಟ್ ಕೆಲಸ ಆಗಿದೆ. ಜಿಲ್ಲೆಯಲ್ಲಿ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಸಮಸ್ಯೆ ಆಗಬಹುದು.

ಪ್ರತಿ ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.  ಐದು ವಿಧಾನಸಭಾ ಕ್ಷೇತ್ರಕ್ಕೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.  ನಾಳೇ ಸಭೆ ನಡೆಸಿ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆಯಬೇಕು. ಪ್ರತಿ ತಾಲೂಕಿಗೆ ಸಹಾಯವಾಣಿ ಆರಂಭ ಮಾಡಿದ್ದೇವೆ. ಪ್ರತಿದಿನ ನೀರಿನ ಸಮಸ್ಯೆ ಬಗ್ಗೆ ಡಿಸಿಗೆ ಮಾಹಿತಿ ನೀಢಬೇಕು.   ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಶಿವರಾಜ್ ತಂಗಡಗಿ ಸೂಚನೆ ನೀಡಿದರು.

Key words  drinking water, problems,Minister, Shivraj Thangadgi

The post ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ- ಸಚಿವ ಶಿವರಾಜ್ ತಂಗಡಗಿ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಲ ಬೇಗ ಕೂಡಿ ಬರುತ್ತಿದೆ: ಡಿಕೆಶಿಗೆ ಅಧಿಕಾರದ ಎಲ್ಲಾ ಲಕ್ಷಣಗಳು  ಕಾಣುತ್ತಿದೆ- ಶಾಸಕ ಇಕ್ಬಾಲ್ ಹುಸೇನ್

ರಾಮನಗರ,ಏಪ್ರಿಲ್,28,2026 (www.justkannada.in):  ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್ ಗೆ ಅಧಿಖಾರ ಸಿಗುತ್ತೆ...

ಮಕ್ಕಳ ಜೊತೆ ಫುಟ್ಬಾಲ್ ಆಡಿ ಸಂಭ್ರಮಿಸಿದ ಪ್ರಧಾನಿ ಮೋದಿ

ಗ್ಯಾಂಗ್ಟಕ್ ,ಏಪ್ರಿಲ್,28,2026 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಕ್ಕಿಂನ...

ಮೈಸೂರು: ಜೆಎಸ್ಎಸ್ ಕಾರ್ಪೊರೇಟ್ ಲಾ ಮೂಟ್ ಕೋರ್ಟ್ ಸ್ಪರ್ಧೆ ಯಶಸ್ವಿ

ಮೈಸೂರು,ಏಪ್ರಿಲ್,27,2026 (www.justkannada.in): ಜೆಎಸ್ಎಸ್ ಮಹಾವಿದ್ಯಾಪೀಠದ ಅಧೀನದಲ್ಲಿರುವ ಮೈಸೂರು ಕುವೆಂಪುನಗರದ ಜೆಎಸ್ಎಸ್ ಕಾನೂನು...

ಸಚಿವ ಸುಧಾಕರ್ ಗೆ ಏನಾಗಿದೆ? ಮಾಹಿತಿ ಏಕೆ ಮುಚ್ಚಿಡುತ್ತಿದ್ದೀರಿ? ಬಹಿರಂಗಪಡಿಸಿ- ಕೇಂದ್ರ ಸಚಿವ HDK ಆಗ್ರಹ

ಬೆಂಗಳೂರು,ಏಪ್ರಿಲ್,27,2026 (www.justkannada.in): ಸಚಿವ ಡಿ.ಸುಧಾಕರ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು...