ಬೆಂಗಳೂರು,ಮಾರ್ಚ್,12,2025 (www.justkannada.in): ಗ್ಯಾರಂಟಿ ಅನುಷ್ಟಾನ ಸಮಿತಿ ಮೂಲಕ ರಾಜ್ಯದ ತೆರಿಗೆ ಹಣವನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಹಂಚುತ್ತಿದೆ. ರಾಜ್ಯ ಇತಿಹಾಸದಲ್ಲೇ ಯಾವ ಪಕ್ಷವೂ ಇಂತಹ ನೀಚ ಕೆಲಸ ಮಾಡಿರಲಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಗ್ಯಾರಂಟಿ ಹೆಸರಲ್ಲಿ ದಲಿತರ ಅಭಿವೃದ್ದಿ ಹಣ ದುರ್ಬಳಕೆ ಮಾಡಿದ್ದಾರೆ. ಗ್ಯಾರಂಟಿ ಅನುಷ್ಟಾನ ಸಮಿತಿ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ರಾಜ್ಯದ ತೆರಿಗೆ ಹಣವನ್ನ ಹಂಚುತ್ತಿದೆ ಇತಿಹಾಸದಲ್ಲೇ ಯಾಪಕ್ಷವೂ ಇಂತಹ ನೀಚ ಕೆಲಸ ಮಾಡಿರಲಿಲ್ಲ ಎಂದು ಕಿಡಿಕಾರಿದರು.
ಇದರ ಫಲವನ್ನು ಕಾಂಗ್ರೆಸ್ ಅನುಭವಿಸುತ್ತದೆ. ಈಗ ಕೊಡುತ್ತಿರುವ ಗ್ಯಾರಂಟಿ ಜೊತೆ ಇನ್ನೂ 5 ಗ್ಯಾರಂಟಿ ಸೇರಿಸಿ ತೊಂದರೆ ಇಲ್ಲ. ಆದರೆ ಜನರ ಸರ್ಕಾರದ ತೆರಿಗೆ ಹಣವನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಆಕ್ಷೇಪವಿದೆ. ಗ್ಯಾರಂಟಿ ಅನುಷ್ಟಾನ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಮ್ಮ ಪಕ್ಷದ ಹಣ ನೀಡಿ, ಅದನ್ನ ಬಿಟ್ಟು ಸರ್ಕಾರದ ತೆರಿಗೆ ಹಣ ಯಾಕೆ ಕೊಡುತ್ತೀರಿ ಎಂದು ಶಾಸಕ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
Key words: state, tax, money, Congress activists, MLA, Janardhana Reddy
The post ‘ಕೈ’ ಕಾರ್ಯಕರ್ತರಿಗೆ ರಾಜ್ಯದ ತೆರಿಗೆ ಹಣ ಹಂಚಿಕೆ: ಸರ್ಕಾರದ ವಿರುದ್ದ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.