ಮೈಸೂರು,ಮಾರ್ಚ್,15,2025 (www.justkannada.in): ಕ್ರಿಕೆಟ್ ಆಡಲು ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಹೆಚ್ ಡಿ ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದ ದಿವ್ಯಾ ಕುಮಾರ್ ಮೃತ ಯುವಕ. ಫೆಬ್ರವರಿ 24 ರಂದು ಬೀಚನಹಳ್ಳಿಯಲ್ಲಿ ನೇರಳೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಫೈನಲ್ ಪಂದ್ಯದಲ್ಲಿ ಜೆಪಿ ವಾರಿಯರ್ಸ್ ವಿರುದ್ಧ ದಿವ್ಯಾ ಕುಮಾರ್ ಸಿಕ್ಸ್ ಹೊಡೆದು ಗೆಲ್ಲಿಸಿದ್ದನು.
ಮ್ಯಾಚ್ ಗೆದ್ದ ಬಳಿಕ ದಿವ್ಯಾ ಕುಮಾರ್ ಟೀಂ ಪಾರ್ಟಿ ಮಾಡಿತ್ತು. ನಂತರ ಪಾರ್ಟಿ ಮುಗಿಸಿ ಹೊರಟಿದ್ದ ದಿವ್ಯಾಕುಮಾರ್ ಅಂದು ನಡುರಸ್ತೆಯಲ್ಲಿ ಬಿದ್ದಿದ್ದನು. ತಕ್ಷಣವೇ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದರು.
ಮೊದ ಮೊದಲು ಕುಟುಂಬಸ್ಥರು ಬೈಕ್ ಅಪಘಾತದಿಂದ ಹೀಗಾಗಿದೆ ಎಂದುಕೊಂಡಿದ್ದರು. ನಂತರ ಬೈಕ್ ಗೆ ಏನೂ ಆಗದಿರುವ ಕಾರಣ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ 9 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದಿವ್ಯಾ ಕುಮಾರ್ ನಿನ್ನೆ ಸಾವನ್ನಪ್ಪಿದ್ದು ಇದೀಗ ಸಾವಿನ ಸುತ್ತ ಅನುಮಾನಗಳ ಹುತ್ತ ಹುಟ್ಟಿಕೊಂಡಿದೆ.
ಈ ಮಧ್ಯೆ ಕ್ರಿಕೆಟ್ ಆಯೋಜಕರು ನಮ್ಮ ಕೈಗೆ ಸಿಕ್ಕಿಲ್ಲ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಕ್ರಿಕೆಟ್ ವಿಚಾರಕ್ಕೆ ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಅನುಮಾನ ಪಟ್ಟಿದ್ದು, ಪೊಲೀಸರು ಸರಿಯಾಗಿ ತನಿಖೆ ಮಾಡಬೇಕು. ದಿವ್ಯಾ ಕುಮಾರ್ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
Key words: Suspicious death, young man, cricket, mysore
The post ಕ್ರಿಕೆಟ್ ಆಡಲು ಹೋಗಿದ್ದ ಯುವಕ ಅನುಮಾನಾಸ್ಪದ ಸಾವು: ತನಿಖೆಗೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.