ಬೆಂಗಳೂರು,ಫೆಬ್ರವರಿ,10,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಸುದ್ದಿಯಾಗಿ ಡಿನ್ನರ್ ಪಾಲಿಟಿಕ್ಸ್ ನಡೆದಿತ್ತು. ಇದಾದ ಬಳಿಕ ಗೃಹ ಸಚಿವ ಜಿ. ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿನ್ನೆ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಾ.ಜಿ.ಪರಮೇಶ್ವರ್, ನಾನು ನಿನ್ನೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ನಮ್ಮ ಕುಟುಂಬದ ಹಿರಿಯಣ್ಣ. ರಾಜಕೀಯ ಹೊರತಪಡಿಸಿ ಆಗಾಗ ಖರ್ಗೆ ಅವರನ್ನ ಭೇಟಿ ಮಾಡುತ್ತೇನೆ. ನಿನ್ನೆ ಭೇಟಿ ವೇಳೆ ಯಾವುದೇ ರಾಜಕೀಯ ಮಾತನಾಡಿಲ್ಲ ಕುಟುಂಬದ ಆನೇಕ ವಿಚಾರಗಳನ್ನ ಮಾತನಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
Key words: Mallikarjuna Kharge, Minister, Parameshwar, meet
The post ಖರ್ಗೆ ನಮ್ಮ ಕುಟುಂಬದ ಹಿರಿಯಣ್ಣ: ರಾಜಕೀಯ ಮಾತನಾಡಿಲ್ಲ- ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.