ಬೆಂಗಳೂರು, ಮೇ,5,2025 (www.justkannada.in): ಪಹಲ್ಗಾಮ್ ದಾಳಿಗೆ ಕನ್ನಡ ತಳುಕು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಗಾಯಕ ಸೋನು ನಿಗಮ್ ವಿರುದ್ದ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಈಗಾಗಲೇ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿದೆ. ಇದೀಗ ಸೋನು ನಿಗಮ್ ಅವರನ್ನ ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಈ ಸಂಬಂಧ ಸೋನು ನಿಗಮ್ ವಿರುದ್ದ ಇಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ನಾರಾಯಣಗೌಡರು, ಕನ್ನಡವನ್ನ ಭಯೊತ್ಮಾದನಾ ದಾಳಿಗೆ ಹೋಲಿಸಿದ್ದು ಸರಿಯಲ್ಲ. ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ ಹಾಡಲ್ಲ ಎಂದು ಹೇಳಬಹುದಿತ್ತು. ಗಾಯಕ ಸೋನು ನಿಗಮ ಶೀಘ್ರವೇ ಬಂಧಿಸಬೇಕು. 4 ದಿನವಾದ್ರೂ ಜೈಲಿಗೆ ಕಳುಸಿದ್ರೆ ಪರಿವರ್ತನೆ ಆಗುತ್ತೆ ಎಂದರು.
ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಸೋನುನಿಗಮ್ ದುರ್ವರ್ತನೆ ಇದೇ ಮೊದಲಲ್ಲ. ಹಿಂದಿಯಲ್ಲಿ ಹಾಡಿಗೆ 40 ಸಾವಿರ ರೂ. ಪಡೆಯುತ್ತಾರೆ. ಕನ್ನಡದಲ್ಲಿ 2 ಲಕ್ಷ ತೆಗೆದುಕೊಂಡು ಆಹಂ ತೋರಿಸುತ್ತಾರೆ. ಕೆಲ ನಿರ್ಮಾಪಕರು ದೂರಿದ್ದಾರೆ ಎಂದರು.
Key words: singer, Sonu Nigam,arrest, Karave, protests
The post ಗಾಯಕ ಸೋನು ನಿಗಮ್ ಶೀಘ್ರ ಬಂಧನಕ್ಕೆ ಒತ್ತಾಯ; ಕರವೇ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.