ಬೆಂಗಳೂರು,ಜೂನ್,26,2025 (www.justkannada.in): ಕುಂಕುಮ, ಪ್ಯಾರಾಸಿಟಮಲ್ ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗುಣಮಟ್ಟವಲ್ಲದ ಕುಂಕುಮ ಸರಬರಾಜು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಯಾವ ಬ್ಯಾಚ್ ಫೇಲಾಗಿದೆ ಅದನ್ನು ವಾಪಸ್ ಪಡೆಯಲಾಗುತ್ತದೆ. ಆಹಾರ ಸುರಕ್ಷತಾ ಔಷಧ ನಿಯಂತ್ರಣದಿಂದ ಹಿಂಪಡೆಯಲಾಗುತ್ತದೆ. ಉಳಿದ ಬ್ಯಾಚುಗಳನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ಯಾವ ಔಷಧ ಪರೀಕ್ಷೆ ಮಾಡಿಸಬೇಕು ಎಂದು ಯೋಚನೆ ರೂಪಿಸಿದ್ದೇವೆ. ಟೆಸ್ಟ್ ಮಾಡಬೇಕಾದ ಔಷಧಿ ಬಗ್ಗೆ ಡ್ರಗ್ ಕಂಟ್ರೋಲರ್ ಗೆ ಮಾಹಿತಿ ನೀಡಲಾಗಿದೆ ಎಂದರು.
ಕುಂಕುಮ ಗುಣಮಟ್ಟ ಇಲ್ಲ ಎಂದು ವರದಿ ಬಂದಿದೆ. ನಾವು ಸರಬರಾಜು ಆಗಿರುವುದನ್ನು ವಾಪಸ್ ಪಡೆಯುತ್ತೇವೆ. ಗುಣಮಟ್ಟದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ತಯಾರಕರು ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದನೆ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿದ್ದು, ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ.
Key words: Return, substandard, saffron ,supply, Minister, Dinesh Gundu Rao
The post ಗುಣಮಟ್ಟವಲ್ಲದ ಕುಂಕುಮ ಸರಬರಾಜು ವಾಪಸ್ : ಸಚಿವ ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.