12
August, 2026

A News 365Times Venture

12
Wednesday
August, 2026

A News 365Times Venture

ಗೃಹ ಸಚಿವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ಹೋಗಬೇಕಾದ್ರೆ ಡಿಜಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ

Date:

ಬೆಂಗಳೂರು,ಫೆಬ್ರವರಿ,27,2025 (www.justkannada.in): ಗೃಹ ಸಚಿವ ಡಾ. ಜಿ. ಪರಮೇಶ್ವರ್  ಅವರ ಮನೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೇರವಾಗಿ ಭೇಟಿ ನೀಡುವಂತಿಲ್ಲ. ಗೃಹ ಸಚಿವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ಹೋಗಬೇಕಾದ್ರೆ ಡಿಜಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ವರ್ಗಾವಣೆ ಹಾಗೂ ಕೆಲಸದ ವಿಚಾರವಾಗಿ  ಗೃಹ ಸಚಿವ ಡಾಜಿ.ಪರಮೇಶ್ವರ್ ಮನೆಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಗೃಹಸಚಿವರ ಕಚೇರಿಗೆಗಷ್ಟೇ ಅಲ್ಲದೇ, ಮನೆಗೂ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಈ ಬಗ್ಗೆ ಗಹ ಸಚಿವರ ಕಚೇರಿಯಿಂದ ಡಿಜಿ ಐಜಿ ಕಚೇರಿಗೆ ಮಾಹಿತಿ ಬಂದಿತ್ತು ಎನ್ನಲಾಗಿದೆ. ಇದನ್ನು ಆಧರಿಸಿ ಖುದ್ದು ಡಿಜಿ &ಐಜಿಪಿ ಅಲೋಕ್ ಮೋಹನ್‌ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೆಮೋ ಕಳಿಸಿದ್ದು, ಪೊಲೀಸ್ ಅಧಿಕಾರಿ, ಪೊಲೀಸ್ ಸಿಬ್ಬಂದಿಗಳು ಗೃಹ ಸಚಿವರ ಮನೆಗೆ ನೇರವಾಗಿ ಹೋಗುವಂತಿಲ್ಲ.

ಗೃಹ ಸಚಿವರ ಮನೆ ಅಥವಾ ಕಚೇರಿಗೆ ಭೇಟಿ ನೀಡಬೇಕಾದರೇ ಡಿಜಿ ಕಚೇರಿಯಲ್ಲಿ ನೋಂದಣಿ ಮಾಡಿಸೋದು ಕಡ್ಡಾಯ‌ವಾಗಿದೆ. ನೋಂದಣಿ ಮಾಡಿಸಿಕೊಳ್ಳದೇ ಗೃಹ ಸಚಿವರ ಮನೆಗೆ ಯಾರೂ ಹೋಗುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

Key words: Registration, DG office, police, home minister, residence

The post ಗೃಹ ಸಚಿವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ಹೋಗಬೇಕಾದ್ರೆ ಡಿಜಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಚಾಮರಾಜನಗರ,ಆಗಸ್ಟ್,12,2026 (www.justkannada.in): ಅಕ್ರಮವಾಗಿ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಸಂಗ್ರಹಿಸಿ ಮಾರಾಟಕ್ಕೆ...

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ: ಮೈಸೂರಿನಲ್ಲಿ ರೈತರಿಂದ ಪ್ರತಿಟನೆ, ಕಾಡಾ ಕಚೇರಿಗೆ ಮುತ್ತಿಗೆ

ಮೈಸೂರು,ಆಗಸ್ಟ್,12,2026 (www.justkannada.in): ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಕಾಡಾ...

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..?

ಬೆಂಗಳೂರು,ಆಗಸ್ಟ್,12,2026 (www.justkannada.in):  ನೂತನ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಕೊನೆಗೂ ಖಾತೆ...

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌...