ಮೈಸೂರು,ಜೂನ್,18,2025 (www.justkannada.in): ಜಿಲ್ಲೆಯ ತಿ. ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ವ್ಯಾಪ್ತಿಯ ಚಾಮನಹಳ್ಳಿ ಕೆರೆಗೆ ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳಾದ ಯುಕೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮನಹಳ್ಳಿ ಕೆರೆಯ ಮೀನುಪಾಶವಾರು ಹಕ್ಕನ್ನು ಶ್ರೀ ಚಾಮುಂಡೇಶ್ವರಿ ಮೀನುಗಾರರ ಸಹಕಾರ ಸಂಘ ಚಾಮನಹಳ್ಳಿರವರಿಗೆ ವಹಿಸಲಾಗಿದ್ದು ಸದರಿ ಕೆರೆಯಲ್ಲಿ ಪಾಲನೆಯಲ್ಲಿರುವ ರೋಹು ತಳಿ ಮೀನುಮರಿಗಳ ಬೆಳವಣಿಗೆಯನ್ನು ಪರಿಶೀಲಿಸಿದರು.
ಸಹಕಾರ ಸಂಘದ ವತಿಯಿಂದಲೇ ಮೀನು ಮಾರಾಟ ಮಾಡುವುದರಿಂದ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಹೆಚ್ಚಿನ ಲಾಭ ಗಳಿಸಬುಹುದಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಸಂಘದ ಅಧ್ಯಕ್ಷರು ಮಾತನಾಡಿ, ಮೀನು ಮಾರಾಟ ಮಾಡಲು ಹಾಗೂ ಉಪಹಾರ ಗೃಹ ಮಾಡಲು ಸ್ಳಳಾವಕಾಶ ಕಲ್ಲಿಸಿಕೊಡುವಂತೆ ಹಾಗೂ ಕೆರೆಯಲ್ಲಿ ಬೆಳೆದಿರುವ ಜಲಸಸ್ಯ, ಕೆರೆಯ ಏರಿ ದುರಸ್ಥಿ ಮತ್ತು ಹೂಳು ತೆಗೆಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Key words: Mysore, ZP, CEO, visits, Chamanahalli Lake
The post ಚಾಮನಹಳ್ಳಿ ಕೆರೆಗೆ ಜಿ.ಪಂ CEO ಭೇಟಿ, ಪರಿಶೀಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.