ಬೆಂಗಳೂರು,ಏಪ್ರಿಲ್,18,2025 (www.justkannada.in): ಜಾತಿ ಗಣತಿ ವಿಚಾರವಾಗಿ ನಿನ್ನೆ ವಿಶೇಷ ಸಂಪುಟ ಸಭೆ ನಡೆದಿದ್ದು ಸಚಿವರ ಅಭಿಪ್ರಾಯ ಪಡೆದ ಸಿಎಂ ಸಿದ್ದರಾಮಯ್ಯ ಮೇ 2 ರಂದು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಚಿವ ಸಂಪುಟದಲ್ಲಿ ಜಾತಿಗಣತಿ ಮುಂದೂಡಿಕೆ ವಿಚಾರ ಕುರಿತು ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಜಾತಿ ಗಣತಿ ವಿಚಾರವಾಗಿ ಸರ್ಕಾರ ಮುಕ್ತವಾಗಿದೆ. ಎಲ್ಲರಿಗೂ ಚರ್ಚೆಗೆ ಅವಕಾಶ ನೀಡಲಾಗಿದೆ. ನಿನ್ನೆ ನಡೆದ ಸಭೆ ಅಪೂರ್ಣವಾಗಿದ್ದು, ಸಿಎಂ, ಡಿಸಿಎಂ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಸಿ ಸುಧಾಕರ್, ಹಿಜಾಬ್ ಪ್ರಕರಣ ರೀತಿ ರಾಜಕೀಯ ಮಾಡಲ್ಲ. ಎಲ್ಲರ ಭಾವನೆಗಳನ್ನ ನಾವು ಗೌರವಿಸುತ್ತೇವೆ. ಸಿಇಟಿ ಪರೀಕ್ಷೆ ಹೊಣೆ ಅಯಾ ಡಿಸಿಗಳಿಗೆ ನೀಡಿದ್ದೇವೆ. ಜನಿವಾರ ತೆಗೆಯಬೇಕು ಎಂಬ ನಿಯಮಗಳಿಲ್ಲ ಜನಿವಾರ ತೆಗೆಸಿದ್ದು ಅತಿರೇಕ. ಎಲ್ಲಾ ಧರ್ಮ ಆಚಾರ ವಿಚಾರ ಗೌರವಿಸಬೇಕು ಎಂದರು.
Key words: Government, caste census, Minister, M.C. Sudhakar
The post ಜಾತಿ ಗಣತಿ ವಿಚಾರವಾಗಿ ಸರ್ಕಾರ ಮುಕ್ತ- ಸಚಿವ ಎಂ.ಸಿ ಸುಧಾಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.