18
July, 2025

A News 365Times Venture

18
Friday
July, 2025

A News 365Times Venture

‘ಜ್ಞಾನಸೇತು’ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮೋದನೆ

Date:

ಬೆಂಗಳೂರು, ಜೂನ್, 26,2025 (www.justkannada.in): ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಆಯವ್ಯಯದ ಅನ್ವಯ ‘ಜ್ಞಾನಸೇತು’ ಕಾರ್ಯಕ್ರಮವನ್ನು ಖಾನ್ ಅಕಾಡೆಮಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಕಾರ್ಯಕ್ರಮವು ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಕಲಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಖಾನ್ ಅಕಾಡೆಮಿ ಸಹಯೋಗ:

ಖಾನ್ ಅಕಾಡೆಮಿ ಇಂಡಿಯಾ, ಒಂದು ಲಾಭರಹಿತ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಉಚಿತವಾಗಿ ಒದಗಿಸುತ್ತದೆ. ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧಾರಿತ 1ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಷಯಗಳು ಉಚಿತವಾಗಿ ಲಭ್ಯವಿರುತ್ತವೆ.

ಖಾನ್‌ಮಿಗೋ ಎಐ ಬಳಕೆ:

8ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು 6ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಖಾನ್‌ಮಿಗೋ ಕೃತಕ ಬುದ್ಧಿಮತ್ತೆಯನ್ನು (Khanmigo AI) ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇದು ಪಾಠ ಯೋಜನೆ, ಪ್ರಶ್ನೆ ಪತ್ರಿಕೆ ಮತ್ತು ರಸಪ್ರಶ್ನೆಗಳನ್ನು ಸಿದ್ಧಪಡಿಸಲು ನೆರವಾಗುತ್ತದೆ.

ಹಾಗೆಯೇ, 8, 9 & 10ನೇ ತರಗತಿಯ ಹಾಗೂ ಪ್ರಥಮ ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಖಾನ್‌ ಮಿಗೊ ಕೃತಕ ಬುದ್ಧಿಮತ್ತೆ (Khanmigo AI) ಮೂಲಕ ತರಗತಿಗಳಲ್ಲಿ ಕಲಿಕಾ ಫಲನಗಳನ್ನು ಸ್ವಯಂ ಕಲಿಕೆಯ ಮೂಲಕ ಸಾಧಿಸಿ ಉತ್ತಮ ಪ್ರಗತಿಯನ್ನು ಹೊಂದುವ ನಿಟ್ಟಿನಲ್ಲಿ ಕಲಿಕೆಯನ್ನು ಸುಗಮಗೊಳಿಸುವುದು.

STEAM ವಿಷಯಗಳ ಕಲಿಕೆ:

ಪ್ರತಿ ಶನಿವಾರದಂದು ಒಂದು ಬೋಧನಾ ಅವಧಿಯನ್ನು ಖಾನ್ ಅಕಾಡೆಮಿ ಇಂಡಿಯಾ ಮೂಲಕ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ (STEAM) ವಿಷಯಗಳಿಗೆ ನಿಗದಿಪಡಿಸಲಾಗುವುದು.

ಪರಿಣಾಮಕಾರಿ ಕಲಿಕೆ:

ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳು ಮತ್ತು ಅಭ್ಯಾಸಗಳನ್ನು ಬಳಸಿಕೊಂಡು ಗಣಿತ ಮತ್ತು ವಿಜ್ಞಾನ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ:

ಸಿಇಟಿ, ಜೆಇಇ, ನೀಟ್, ಕ್ಲಾಟ್, ಕ್ಯುಇಟಿ ಮತ್ತು ಸಿಎ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಖಾನ್ ಅಕಾಡೆಮಿಯ ಅಭ್ಯಾಸ ಮಾದರಿಗಳು, ಪರಿಕಲ್ಪನಾ ವೀಡಿಯೊಗಳು ಮತ್ತು ಪರೀಕ್ಷಾ ಉಪಕರಣಗಳನ್ನು ಬಳಸಲಾಗುತ್ತದೆ.

ಕಾರ್ಯಕ್ರಮದ ವ್ಯಾಪ್ತಿ:

2025-26ನೇ ಸಾಲಿನಲ್ಲಿ 21,726 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 6ರಿಂದ 8ನೇ ತರಗತಿ, 4,871 ಸರ್ಕಾರಿ ಪ್ರೌಢಶಾಲೆಗಳ 8ರಿಂದ 10ನೇ ತರಗತಿಗಳಲ್ಲಿ ಮತ್ತು 1,229 ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಅಂದಾಜು 19,05,025 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಲಿದೆ.

ಶಿಕ್ಷಕರಿಗೆ ತರಬೇತಿ:

ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕಾರ್ಯಾಗಾರ ಮತ್ತು ವೆಬಿನಾರ್‌ ಗಳ ಮೂಲಕ ಖಾನ್ ಅಕಾಡೆಮಿಯ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ತರಬೇತಿ ನೀಡಲಾಗುವುದು. ಪ್ರತಿ ಬ್ಲಾಕ್‌ ನಲ್ಲೂ ಡಿಜಿಟಲ್ ಮೆಂಟರ್‌ ಗಳನ್ನು ನಿಯೋಜಿಸಲಾಗುವುದು.

ಈ ಕಾರ್ಯಕ್ರಮವನ್ನು 540.10 ಲಕ್ಷ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದ್ದು, ಸಮಗ್ರ ಶಿಕ್ಷಾ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ 2025-26ರಲ್ಲಿ (AWP&B) State Specific Innovation (Secondary) Component ಅಡಿಯಲ್ಲಿ ಈ ಅನುದಾನವನ್ನು ಭರಿಸಲಾಗುವುದು.

ಯೋಜನೆಯ ಅನುಷ್ಠಾನದಲ್ಲಿನ ಷರತ್ತುಗಳು:

ಕಾರ್ಯಕ್ರಮದ ಅನುಷ್ಠಾನದಲ್ಲಿ ಡಿಎಸ್‌ ಇಆರ್‌ಟಿ (DSERT) ಮತ್ತು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯಗಳು ಸಮನ್ವಯ ಸಾಧಿಸಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರ ಖಾತೆಗಳು ಖಾನ್ ಅಕಾಡೆಮಿ ಇಂಡಿಯಾ ಆನ್‌ ಲೈನ್ ಕಲಿಕಾ ವ್ಯವಸ್ಥೆಯಲ್ಲಿ ಜೀವನಪರ್ಯಂತ ಉಚಿತವಾಗಿರಬೇಕು.

ಪ್ರತಿ ಶನಿವಾರ ಒಂದು ಅವಧಿಯನ್ನು ಖಾನ್ ಅಕಾಡೆಮಿ ಅಧ್ಯಯನಕ್ಕಾಗಿ ನಿಗದಿಪಡಿಸಬೇಕು.

ಖಾನ್ ಅಕಾಡೆಮಿ ಇಂಡಿಯಾ ಸಂಸ್ಥೆಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಮಾಡುವಂತಿಲ್ಲ ಮತ್ತು ಸಂಸ್ಥೆಯ ಸಹಯೋಗ ಸಂಪೂರ್ಣ ಉಚಿತವಾಗಿರುತ್ತದೆ.

ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಯೋಜನೆಯ ಮೇಲುಸ್ತುವಾರಿ ಪ್ರಾಧಿಕಾರವಾಗಿ ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ವಿವರಗಳು (MoU, ತರಬೇತಿ, ಖರ್ಚು/ವೆಚ್ಚಗಳು) ಸಂಬಂಧಪಟ್ಟ ಇಲಾಖೆಗಳ ಅಧಿಕೃತ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.

ಶಿಕ್ಷಕರು/ಉಪನ್ಯಾಸಕರ ತರಬೇತಿ ಸಾಮಾನ್ಯ ಬೋಧನಾ ಅವಧಿಯಲ್ಲಿ ಮಾಡುವಂತಿಲ್ಲ.

ಮಾಸ್ಟರ್ ರಿಸೋರ್ಸ್ ಪರ್ಸನ್‌ ಗಳು (MRPs) ಮತ್ತು ಶಿಕ್ಷಕರು/ಉಪನ್ಯಾಸಕರಿಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಹಾಗೂ ಎಂಆರ್‌ ಪಿಗಳಿಗೆ ಗೌರವಧನವನ್ನು ಡಿಬಿಟಿ (DBT) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.

ಈ ಮಹತ್ವದ ಹೆಜ್ಜೆಯು ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣವನ್ನು ಒದಗಿಸುವಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.vtu

Key words: State Government,  approves, Jnanasethu, program, Khan academy

The post ‘ಜ್ಞಾನಸೇತು’ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮೋದನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...

ತಾಕತ್ ಇದ್ರೆ ಕಾರಜೋಳ ಅವರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿಬಿಡಿ-ಬಿವೈವಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,17,2025 (www.justkannada.in):  ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ...

ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಜುಲೈ,17,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 18 (ನಾಳೆ)ರಂದು ಮೈಸೂರು...