8
July, 2025

A News 365Times Venture

8
Tuesday
July, 2025

A News 365Times Venture

ಟ್ರಾನ್ಸ್ ಕೊಬ್ಬು ನಿಬಂಧನೆಯ ಅನುಷ್ಟಾನ: ಮೈಸೂರಿನಲ್ಲಿ ಬೇಕರಿ ವೃತ್ತಿಪರರಿಗೆ ಅರಿವು ಕಾರ್ಯಗಾರ

Date:

ಮೈಸೂರು,ಜೂನ್,18,2025 (www.justkannada.in):  ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ  ಆಯುಕ್ತ, ಶ್ರೀನಿವಾಸ್.ಕೆ. ಇವರ ನಿರ್ದೇಶನದ ಮೇಲೆ ಮೈಸೂರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಛೇರಿ ವತಿಯಿಂದ ಕೇಂದ್ರ FSSAI  ನೀಡಿರುವ Trans ಕೊಬ್ಬು (ಐಡೋಜನಿಕರಿಸಿದ. ತೈಲಗಳಿಂದ ಮಾಡಿದ ಸಂಸ್ಕರಿಸಿದ ಬೇಕರಿ ಆಹಾರಗಳಲ್ಲಿ ಉಪಯೋಗಿಸುವ ಕೊಬ್ಬು) ನಿಬಂಧನೆಯ ಅಡಿಯಲ್ಲಿ ನೀಡಿರುವ ಮಾನದಂಡವನ್ನು ಅನುಷ್ಟಾನಗೊಳಿಸಲು ಬೇಕರಿ ವೃತ್ತಿಪರರಿಗೆ ಇಂದು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಸಾರ್ವಜನಿಕರ ಹೃದಯದ ಆರೋಗ್ಯ ಉತ್ತಮಪಡಿಸಲು ಹಾಗೂ ಕಾರ್ಖಾನೆ ಮಟ್ಟದಲ್ಲಿ ತಯಾರಾಗುವ Trans ಕೊಬ್ಬು ಇವುಗಳನ್ನು ಆಹಾರ ಸರಪಳಿಯಿಂದ ನಿರ್ಮೂಲನೆ ಮಾಡುವ ಸಲುವಾಗಿ ಅರಿವು ಕಾರ್ಯಗಾರ ಇಡಿ ರಾಜ್ಯದಲ್ಲಿ ಮೊದಲ ಬಾರಿಗೆ ವಿಶ್ವೇಶ್ವರ ನಗರ ಸಫಾರಿ ಕ್ವಿಸ್ಟ್ ಹೋಟೆಲ್ ನಲ್ಲಿ ಇಂದು ನಡೆಸಲಾಯಿತು

ಕಾರ್ಯಗಾರದಲ್ಲಿ ಬೇಕರಿ ವೃತ್ತಿಪರರು ತೊಡಗಿಸಿಕೊಂಡು ಚರ್ಚೆಯ ಮೂಲಕ Food Safety and Standard Act ಅಡಿಯಲ್ಲಿ ನಿಯಮ 2006 ನಿಬಂಧನೆ 2011ರಡಿಯಲ್ಲಿ Trnas ಕೊಬ್ಬು ನಿಬಂಧನೆಯ ಅನುಷ್ಟಾನಕ್ಕಾಗಿ ಕೈಜೋಡಿಸಿದರು.

ಕಾರ್ಯಕ್ರಮವನ್ನು Transform Banner  ಅಡಿಯಲ್ಲಿ Institute for policy research(IPR) ರವರು Vission for social development (VST) and Technical support from Resolve for save lives(RTSL) ಸಂಸ್ಥೆಗಳ ಸಹಯೋಗದಿಂದ ಅರಿವು ಕಾರ್ಯಗಾರವನ್ನು ನಡೆಸಲಾಗಿತ್ತು.

ಈ ರೀತಿಯ ಸಂವಾದಾತ್ಮಕ ಕಾರ್ಯಗಾರವನ್ನು ಬೇಕರಿ ವೃತ್ತಿಪರರಿಗೆ ಇಡೀ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟ್ರಾನ್ಸ್ ಕೊಬ್ಬು ಪದಾರ್ಥಗಳನ್ನು ಬೇಕರಿ ಉತ್ಪನ್ನಗಳಿಗೆ ಬಳಸದೆ ಇದರ ಪರ್ಯಾಯ ಪದಾರ್ಥ ಉಪಯೋಗದ ಬಗ್ಗೆ ಸೂಕ್ತ ಮಾಹಿತಿಯನ್ನು ವಿನಿಯೋಗ ಮಾಡಲಾಯಿತು.

ಆಹಾರ ಸುರಕ್ಷತಾಧಿಕಾರಿಗಳಾದ ದ್ರಾಕ್ಷಾಯಣಿ.ಎಸ್ ಬಡಿಗೇರ್ ಮತ್ತು ಗಿರೀಶ್.ಎಸ್.ಆರ್ ಅವರು ಬೇಕರಿ ವೃತ್ತಿಪರರಿಗೆ  ಟ್ರಾನ್ಸ್ ಕೊಬ್ಬು Regulation ನ ಅನುಷ್ಟಾವನ್ನು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಕೂಡಲೇ ನಿಬಂಧನೆಗಳಲ್ಲಿ ತಿಳಿಸಿರುವ ಮಾನದಂಡದಂತೆ ಪರ್ಯಾಯ ಪದಾರ್ಥಗಳಿಗೆ ಟ್ರಾನ್ಸ್ ಕೊಬ್ಬು ಬದಲಾಗಿ ಪರ್ಯಾಯ ಪದಾರ್ಥಗಳನ್ನು ತಮ್ಮ ವೃತ್ತಿಯಲ್ಲಿ ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು.

Resolve for save lives ಸಂಸ್ಥೆಯ ಹಿರಿಯ ತಾಂತ್ರಿಕ ಸಲಹೆಗಾರರಾದ ಡಾ. ಭಾರತಿ ಭಾರಧ್ವಜ್ ಅವರು ಟ್ರಾನ್ಸ್ ಕೊಬ್ಬು ಉಪಯೋಗದಿಂದ ಸಾರ್ವಜನಿಕ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಮೈಸೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ  ನಾರಾಯಣಗೌಡ, ಮೈಸೂರು ಬಾಣಸಿಗ ಸಂಘ ಅಧ್ಯಕ್ಷ ಸೆಲ್ವಕುಮಾರ್, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಕಿತ ಅಧಿಕಾರಿ ಡಾ. ರವೀಂದ್ರ.ಎಸ್.ಎಲ್  ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.vtu

Key words: trans fat,  regulation,  Awareness, workshop,  bakery professionals, Mysore

 

The post ಟ್ರಾನ್ಸ್ ಕೊಬ್ಬು ನಿಬಂಧನೆಯ ಅನುಷ್ಟಾನ: ಮೈಸೂರಿನಲ್ಲಿ ಬೇಕರಿ ವೃತ್ತಿಪರರಿಗೆ ಅರಿವು ಕಾರ್ಯಗಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೆಡಿಎಸ್ ನಿಂದ ಶಾಸಕ ಜಿಟಿ ದೇವೇಗೌಡ ದೂರ: ಮೊದಲ ಬಾರಿಗೆ ಮೌನ ಮುರಿದ ಪುತ್ರ ಜಿ.ಡಿ ಹರೀಶ್ ಗೌಡ

ಮೈಸೂರು,ಜುಲೈ,7,2025 (www.justkannada.in):  ಶಾಸಕ ಜಿಟಿ ದೇವೇಗೌಡ  ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ...

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಅದು ಅಧಿಸೂಚಿತ ಖಾಯಿಲೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಜುಲೈ,7,2025 (www.justkannada.in): ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಹೃದಯಾಘಾತ ಒಂದು...

ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಜುಲೈ,7,2025 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ AICC ಹಿಂದುಳಿದ ವರ್ಗಗಳ ರಾಷ್ಟ್ರೀಯ...

ಸಿಎಂ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜುಲೈ,7,2025 (www.justkannada.in): ಮುಖ್ಯಮಂತ್ರಿಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್  ಶಾಸಕರಿಗೇ ವಿಶ್ವಾಸ...