11
June, 2026

A News 365Times Venture

11
Thursday
June, 2026

A News 365Times Venture

ಡಾ.ರಾಜ್‌ ಕುಮಾರ್ ವ್ಯಕ್ತಿತ್ವ ಎಲ್ಲರಿಗೂ ಮಾದರಿ: ಶಾಸಕ ಟಿ ಎಸ್ ಶ್ರೀವತ್ಸ

Date:

ಮೈಸೂರು,ಏಪ್ರಿಲ್,24,2026 (www.justkannada.in): ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ ಕಲಾವಿದ ಹಾಗೂ ಎಲ್ಲ ಸಮುದಾಯದ ಜನರ ಪ್ರೀತಿಗೆ ಪಾತ್ರರಾದ ಡಾ.ರಾಜಕುಮಾರ್ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಟಿ.ಎಸ್ ಶ್ರೀವತ್ಸ ಬಣ್ಣಿಸಿದರು.

ಅರಮನೆಯ ಮುಂಭಾಗದ  ಡಾ. ರಾಜ್ ಕುಮಾರ್ ಉದ್ಯಾನವನದಲ್ಲಿ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು  ಉದ್ಘಾಟಿಸಿ ನಂತರ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದರು.

ತಮ್ಮ ನಟನೆಯ ಮೂಲಕ ಮನೆ ಮಾತಾಗಿ, ಕೋಟ್ಯಾಂತರ ಅಭಿಮಾನಿ ದೇವರ ಹೃದಯದಲ್ಲಿ ಡಾ.ರಾಜಕುಮಾರ್ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಅವರ ವೃತ್ತಿ ಬದುಕು ನಮಗೆಲ್ಲರಿಗೂ ಮಾದರಿಯಾಗುವಂತಹದ್ದು. ಅವರ ಜೀವನದ ಆದರ್ಶಗಳನ್ನು ತಿಳಿದು ನಮ್ಮ ಜೀವನದಲ್ಲೂ ಅನುಕರಣೆ ಮಾಡಿಕೊಳ್ಳಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮುಡಾ ಮಾಜಿ  ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಮುಖಂಡ ಜೋಗಿ ಮಂಜು, ಕೆಎಂಪಿಕೆ ಚಾರಿಟೇಬಲ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಪ್ರಭು,  ಕೀರ್ತಿ, ಕಿಶೋರ್ ಹಾಗೂ ಇನ್ನಿತರರು ಹಾಜರಿದ್ದರು.

Key words: Dr. Rajkumar, Birthday, blood donation, Mysore,

The post ಡಾ.ರಾಜ್‌ ಕುಮಾರ್ ವ್ಯಕ್ತಿತ್ವ ಎಲ್ಲರಿಗೂ ಮಾದರಿ: ಶಾಸಕ ಟಿ ಎಸ್ ಶ್ರೀವತ್ಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: ಸರ್ಕಾರಕ್ಕೆ ಕುಟುಕಿದ JDS

ಬೆಂಗಳೂರು, ಜೂನ್​​, 12,2026 (www.justkannada.in): ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ದುರ್ಬಳಕೆ ತಡೆಯಲು...

ಪ್ರಧಾನಿಯಾಗಿ ಮೋದಿ 12 ವರ್ಷ: ಮೈಸೂರಿನಲ್ಲಿ ಅಭಿನಂದನಾ ಜಾಥಾ, ವಿಶೇಷ ಅರ್ಚನೆ

ಮೈಸೂರು,ಜೂನ್,10,2026 (www.justkannada.in): ಪ್ರಧಾನಿಯಾಗಿ ನರೇಂದ್ರ ಮೋದಿ  12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ...

ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನ ಇಲ್ಲ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,10,2026 (www.justkannada.in):  ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದು ಬೃಹತ್...

ಮೋದಿ ಸಾಧನೆ ಬಗ್ಗೆ ಬಿಜೆಪಿ ಸಂಭ್ರಮ ಪ್ರಜಾಪ್ರಭುತ್ವ ವಿರುದ್ಧದ ಅತಿದೊಡ್ಡ ಅಣಕ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್,10,2026 (www.justkannada.in): ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ...