ಬೆಂಗಳೂರು,ಮಾರ್ಚ್, 15,2025 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಐದು ವರ್ಷ ಅವಧಿ ಪೂರೈಸಿದ ಅಂಗವಾಗಿ ಪಕ್ಷದ ಶಾಸಕರಿಗೆ ಆಯೋಜಿಸಿದ್ದ ಔತಣಕೂಟಕ್ಕೆ ಗೃಹ ಸಚಿವ ಪರಮೇಶ್ವರ್ ಗೈರಾಗಿದಕ್ಕೆ ಸಚಿವ ಎಂ.ಬಿ ಪಾಟೀಲ್ ಕಾರಣ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಐದು ವರ್ಷ ಅವಧಿ ಪೂರೈಸಿದ ಅಂಗವಾಗಿ ಪಕ್ಷದ ಶಾಸಕರಿಗೆ ಭೋಜನಾ ವ್ಯವಸ್ಥೆ ಮಾಡಿದ್ದರು. ಪರಮೇಶ್ವರ್ ಹೊರತುಪಡಿಸಿ ಎಲ್ಲರೂ ಅದರಲ್ಲಿ ಭಾಗವಹಿಸಿದ್ದರು. ಪರಮೇಶ್ವರ್ ಅವರ ಕಡೆಯ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಈ ಕಾರಣಕ್ಕಾಗಿ ಅವರು ಔತಣಕೂಟದಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಡಿ.ಕೆ.ಶಿವಕುಮಾರ್‌ರವರ ಔತಣಕೂಟಕ್ಕೆ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಮತ್ತೆ ಇನ್ನ್ಯಾವ ಬೇಗುದಿ ಇರಲು ಸಾಧ್ಯ. ಕಾಂಗ್ರೆಸ್ ನಲ್ಲಿ ಯಾವುದೇ ಬೇಗುದಿಯಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಅಧಿವೇಶನ ನಡೆದಾಗ ಸಾಮಾನ್ಯವಾಗಿ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಭೋಜನಾ ಕೂಟ ಆಯೋಜಿಸುತ್ತಾರೆ. ನಾನೂ ಕೂಡ ಹಲವು ಬಾರಿ ಭೋಜನಾಕೂಟ ಆಯೋಜಿಸಿದ್ದೇನೆ. ಅದರಲ್ಲಿ ವಿಶೇಷ ಏನಿಲ್ಲ ಎಂದರು.
Key words: Minister, M.B. Patil, Parameshwar, absence, DK Shivakumar, dinner party
The post ಡಿಕೆ ಶಿವಕುಮಾರ್ ಔತಣಕೂಟಕ್ಕೆ ಪರಮೇಶ್ವರ್ ಗೈರಾಗಿದ್ದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.