ಬೆಂಗಳೂರು,ಮೇ,15,2026 (www.justkannada.in): ಇಂದು ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪುರೋಹಿತರು ನಿವಾಸಕ್ಕೆ ಆಗಮಿಸಿ ಆಶೀರ್ವಾದಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ಆಗಮಿಸಿದ ಪುರೋಹಿತರು ಮನ್ಯುಸ್ತುಕ್ತ ಪಠಿಸಿ ಅಧಿಕಾರ, ಅಂದುಕೊಂಡಿದ್ದು ನೆರವೇರಲಿ ಎಂದು ಆಶೀರ್ವಾದಿಸಿದ್ದಾರೆ.
ಹಾಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಗೆ ಆಶೀರ್ವಾದಿಸಲು ವಿವಿಧ ಮಠಾಧೀಶರು ನಿವಾಸಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ರಾಮನಗರದ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದರು.
Key words: DCM, DK Shivakumar, birthday, Priests, bless
The post ಡಿಸಿಎಂ ಡಿಕೆಶಿ ಹುಟ್ಟುಹಬ್ಬ: ನಿವಾಸಕ್ಕೆ ಬಂದು ಆಶೀರ್ವಾದಿಸಿದ ಪುರೋಹಿತರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




